ಅಗ್ನಿಶಾಮಕ ಸೇವೆ ಕ್ರೀಡೆಗಳು - ಅಗ್ನಿಶಾಮಕ ಸೇವಾ ಕ್ರೀಡಾ ಕೂಟ: 5 ಚಿನ್ನದ ಪದಕ ಪಡೆದ ರಾಜ್ಯ ಅಗ್ನಿಶಾಮಕ ತಂಡ

varthajala
0

ಬೆಂಗಳೂರು, ಫೆಬ್ರವರಿ 07 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿಗಳಾದ ಬಿ. ಹೆಚ್. ನಾಗರಾಜ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಅವಿನಾಶ್.ಆರ್, ಮುಖ್ಯ ಕಚೇರಿಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ  ಮಂಜುನಾಥ್ ಎಸ್, ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣಾಧಿಕಾರಿ ರವರುಗಳ ಸಾರಾಥ್ಯದಲ್ಲಿ 2024 ನೇ ಸಾಲಿನ ಗುಜರಾತ್ ರಾಜ್ಯದ ಅಹಮದಾಬಾದ್‍ನಲ್ಲಿ ಫೆಬ್ರವರಿ 01 ರಿಂದ  04 ರವರೆಗೆ ನಡೆದ 02 ನೇALL India Fire Service Sports & Fire Service Sports Meet 2024  ಕ್ರೀಡಾಕೂಟದಲ್ಲಿ ಭಾಗವಹಿಸಿ, ಪೃಥ್ವಿ ಎಮ್.ಆರ್ ಅವರ ನಾಯಕತ್ವದಲ್ಲಿ ಕಬ್ಬಡ್ಡಿ ತಂಡವು, ದೀಪಕ ಪಟಗಾರ್ ಅವರು ಬ್ಯಾಟ್‍ಮಿಂಟನ್ ಸಿಂಗಲ್ಸ್‍ನಲ್ಲಿ, ದೀಪಕ ಪಟಗಾರ್ ಮತ್ತು ಆದರ್ಶ ಎಮ್. ವಿ ಅವರು ಬ್ಯಾಟ್‍ಮಿಂಟನ್ ಡಬಲ್ಸ್‍ನಲ್ಲಿ, ಅಶ್ವೀನ್ ಸನೀಲ್ ಅವರು 100 ಮೀ ಓಟದಲ್ಲಿ ಹಾಗೂ ಗೋಪಾಲ್ ಗೌಡ ಅವರು ಹೈ ಜಂಪ್‍ನಲ್ಲಿ ಬಂಗಾರದ ಪದಕಪಡೆದಿದ್ದಾರೆ.  
ದುಂಡಪ್ಪ ಅಪ್ಪಾಸಾಹೇಬ ಬಡೆಕರ್35 ವರ್ಷಕ್ಕಿಂತ ಹೆಚ್ಚು ವಯೋಮಿತಿಯಲ್ಲಿ ಪ್ರತಿನಿಧಿಸಿ 1500 ಮೀ ಓಟದಲ್ಲಿ ಬೆಳ್ಳಿ ಪದಕ ಹಾಗೂ ಕಂಚಿನ ಪದಕ ಪಡೆದಿದ್ದಾರೆ. ಅದೇ ರೀತಿ ರಮೀಜ್‍ರಾಜ ಶೇಖ್ ಮತ್ತು ತಂಡವು 4x100 ರಿಲೇ ಓಟದಲ್ಲಿ ಕಂಚಿನ ಪದಕವನ್ನು ಪಡೆದಿದಾರೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)