ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಬ್ಬಾಳ ಭಾಗದ ವಿಜಯದಶಮಿಯ ಪಥಸಂಚಲನ ಅಕ್ಟೋಬರ್ 6, ಭಾನುವಾರ ನಾಗವಾರದಲ್ಲಿ ನಡೆಯಿತು.
1925 ರಲ್ಲಿ ವಿಜಯದಶಮಿಯ ದಿನ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೂ ಸ್ವಯಂಸೇವಕರು ವಿಜಯದಶಮಿಯ ಅಂಗವಾಗಿ ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಾಗವಾರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಆಕರ್ಷಕ ಪಥಸಂಚಲನದಲ್ಲಿ 500 ಕ್ಕೂ ಹೆಚ್ಚು ಗಣವೇಶಧಾರಿ ಸ್ವಯಂಸೇವಕರು ಭಾಗವಹಿಸಿದ್ದರು. ದಾರಿಯುದ್ದಕ್ಕೂ ನೆರೆದಿದ್ದ ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಸಂಚಲನವನ್ನು ಸ್ವಾಗತಿಸಿದರು.