ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ್ ರಚನೆ?

varthajala
0

 

ನವದೆಹಲಿ: ಈ ವಾರಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ  ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ್‌ ರಚನೆ  ಸಾಧ್ಯತೆ ಇದೆ.

ಏ.19 ಕ್ಕೆ ಪ್ರಧಾನಿ ಮೋದಿ ಅವರು ಜಮ್ಮು-ಕಾಶ್ಮೀರ ಪ್ರವಾಸ ರದ್ದು ಮಾಡಿದ್ದಾರೆ. ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು  ಭೇಟಿಯಾಗಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.

ಮೋದಿ ಭೇಟಿ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಭೇಟಿಯಾಗಿ ಚರ್ಚೆ ನಡೆಸಿದರು. ರಾಷ್ಟ್ರಪತಿಗಳನ್ನು ಕೇಂದ್ರ ಸಚಿವರು ಭೇಟಿಯಾಗಿದ್ದಾರೆ.

ಬಿಹಾರ ಚುನಾವಣೆ ಹೊತ್ತಲ್ಲೇ ಸಂಪುಟದಲ್ಲಿ ಬದಲಾವಣೆ ಸುದ್ದಿ ಕೇಳಿಬಂದಿದೆ. ತಮಿಳುನಾಡು, ಪಶ್ಚಿಮ ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ಪುನರ್ ರಚನೆ ಸಾಧ್ಯತೆ ಇದೆ

Post a Comment

0Comments

Post a Comment (0)