ಬೆಂಗಳೂರು: ತಕ್ಷಣವೇ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ದೃಢೀಕರಣ, ಬೆರಳಚ್ಚು ಮೂಲಕ ಗುರುತು ಸೇರಿದಂತೆ ಇನ್ನಿತರ ಕೆವೈಸಿ ನವೀಕರಿಸಬೇಕು, ಏಪ್ರಿಲ್ ೩೦ ರೂಳಗೆ ಇ-ಕೆವೈಸಿ ಮಾಡಿಸದೇ ಹೋದರೆ ಮುಂದಿನ ತಿಂಗಳು ರೇಷನ್ ಸಿಗಲ್ಲ ಎಂದು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ,
ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಯಲ್ಲಿ ಆಧಾರ್ ದೃಢೀಕರಣವನ್ನು ಉಚಿತವಾಗಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ, ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಬೆರಳಚ್ಚು ಮೂಲಕ ತಮ್ಮ ಗುರುತು ನೋಂದಣೀ ಅಥವಾ ಮರು ನೋಂದಣಿ ಮಾಡಿಸದೆ ಇರುವ ಎಲ್ಲಾ ಸದಸ್ಯರು ಏ.೩೦ ರೊಳಗೆ ಬಯೋಮೆಟ್ರಿಕ್ ಸಂಗ್ರಹಣೆ ಮಾಡಿಸಿಕೊಳ್ಳಲು ಅಂತಿಮ ಅವಕಾಶವನ್ನು ನೀಡಲಾಗಿದೆ, ಇದಕ್ಕೆ ಯಾವುದೇ ಹಣ ಪಾವತಿ ಮಾಡಬೇಕೆಂದಿಲ್ಲ ಎಂದಿದ್ದಾರೆ,