ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಬಾರ್ಡರ್ ನಲ್ಲಿ ಪಾಪಿ ಪಾಕ್ ನ ಕಿರಿಕ್ ಮುಂದುವರಿದಿದೆ, ಸೈನಿಕರ ಗುರಿಯಾಗಿಸಿ ಅಪ್ರಚೋದಿತ ಗುಂಡಿನ ದಾಳಿ ಮುಂದುವರಿದಿದ್ದು ಭಾರತೀಯ ಸೇನೆ ಪ್ರತ್ಯತ್ತರ ಕೊಟ್ಟಿದೆ,
ಪಾಕ್ ಪಡೆಗಳು ಸತತ ಐದನೇ ರಾತ್ರಿಯೂ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಗಡಿಯಲ್ಲ ಯುದ್ಧದ ಭೀತಿ ಶುರುವಾಗಿದೆ,ಕಳೆದ ವಾರ ಪಹಲ್ಗಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಎದುರಿನ ಪ್ರದೇಶಗಳು ಮತ್ತು ಅಖ್ನೂರ್ ಸೆಕ್ಟರ್ ಬಳಿ ಗುಂಡಿನ ದಾಳಿ ನಡೆಸಲಾಗುತ್ತಿದೆ, ಭಾರತೀಯ ಸೇನೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಹಿರಿಯ ಅಧಿಕಾರಿಗಳು ಸ್ಧಳದಲ್ಲಿ ಬೀಡು ಬಿಟ್ಟು ಎಲ್ಲವನ್ನು ಅವಲೋಕಿಸುತ್ತಿದ್ದಾರೆ,