ಇಂಡಿಯನ್ ಪ್ರೀಮಿಯರ್ ಲೀಗ್ ನ 25ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 8 ವಿಕೆಟ್ಗಳ ಜಯ ಸಾಧಿಸಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಡೆವೊನ್ ಬ್ರಾವೊ ಭೇಟಿಯಾಗಿದ್ದರು.
ನೆಟ್ಸ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ಧೋನಿಯನ್ನು ಭೇಟಿಯಾಗಲು ಬಂದ ಬ್ರಾವೊನನ್ನು ಧೋನಿ ವಂಚಕ ಬಂದಿದ್ದಾನೆ ಎಂದು ಕಾಲೆಳೆದರು. ಇದಕ್ಕೆ ಮುಖ್ಯ ಕಾರಣ ಈ ಹಿಂದೆ ಬ್ರಾವೊ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಆದರೆ ಈ ಬಾರಿಯ ಐಪಿಎಲ್ ಮೂಲಕ ಡೆವೊನ್ ಬ್ರಾವೊ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಭಾಗವಾಗಿದ್ದಾರೆ. ಇತ್ತ ಸಿಎಸ್ಕೆಯನ್ನು ತೊರೆದು ಕೆಕೆಆರ್ ಜೊತೆಗೂಡಿರುವ ಬ್ರಾವೊ ಇದೇ ಮೊದಲ ಬಾರಿಗೆ ಧೋನಿಯನ್ನು ಭೇಟಿಯಾಗಿದ್ದಾರೆ.
ಈ ವೇಳೆ ತನ್ನ ಮಾಜಿ ಸಹ ಆಟಗಾರನನ್ನು ವಂಚಕ ಎಂದು ಕರೆಯುವ ಮೂಲಕ ಧೋನಿ, ಬ್ರಾವೊ ಅವರ ಕಾಲೆಳೆದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.