ಬೆಂಗಳೂರು, ಮೇ 10 (ಕರ್ನಾಟಕ ವಾರ್ತೆ):
ಉತ್ತರ ಪ್ರದೇಶದ, ಆಚಾರ್ಯ ನರೇಂದ್ರದೇವ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಯದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಅಂತರ ಕೃಷಿ ವಿಶ್ವವಿದ್ಯಾನಿಲಯಗಳ 2024-25ನೇ ಸಾಲಿನ 22ನೇ ಕ್ರೀಡಾಕೂಟದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಹೆಮ್ಮೆಯ ಸಾಧನೆ ಮಾಡಿದ್ದು, ಮಹಿಳಾ ಹಾಗೂ ಪುರಷರ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮಹಿಳಾ ವಿಭಾಗದಲ್ಲಿ 8 ಚಿನ್ನದ ಪದÀಕ 3 ಬೆಳ್ಳಿ ಮತ್ತು 3 ಕಂಚು ಪದಕಗಳನ್ನು ಪಡೆದಿದೆ. ಪುರುಷರ ವಾಲಿಬಾಲ್, ಬ್ಯಾಡ್ಮಿಂಟನ್ ಸ್ವರ್ಧೆಗಳಲ್ಲಿ ಚಿನ್ನದ ಪದಕ, ಮಹಿಳಾ ವಿಭಾಗದ ಬ್ಯಾಸ್ಕೆಟ್ ಬಾಲ್ ಹಾಗೂ ಬ್ಯಾಡ್ಮಿಂಟನ್ ಸ್ವರ್ಧೆಗಳಲ್ಲಿ ಚಿನ್ನದ ಪದÀಕ ಪಡೆದು ಮಹಿಳಾ ಹಾಗೂ ಪುರಷರ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ವಜ್ರವಹೋತ್ಸವ ಆಚರಿಸುತ್ತಿರುವ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿಗೆ ಹೆಮ್ಮೆಯ ವಿಷಯವಾಗಿದೆ.
ಕ್ರೀಡಾಕೂಟದಲ್ಲಿ ರಾಷ್ಟ್ರದ 56ಕ್ಕೂ ಹೆಚ್ಚು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳಿಂದ ಸುಮಾರು 2000 ಕ್ರೀಡಾಪಟುಗಳು ಭಾಗವಹಿಸಿದ್ದರು.
ಕ್ರೀಡಾಕೂಟದಲ್ಲಿ ವಿಜೇತ ತಂಡವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ: ಎಸ್.ವಿ. ಸುರೇಶ ಅವರು ಅಭಿನಂದಿಸಿ, ಮಾತನಾಡಿದರು. ಕೃಷಿ ವಿದ್ಯಾರ್ಥಿಗಳು ಮೊದಲಿನಿಂದಲೂ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಮುಂದಿದ್ದು, ವಿಶ್ವವಿದ್ಯಾನಿಲಯದ ಹಿರಿಮೆಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸುವ ಮೂಲಕ ಗೌರವವನ್ನು ತಂದುಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಡೀನ್ (ವಿದ್ಯಾರ್ಥಿ ಕಲ್ಯಾಣ) ಡಾ: ಮೋಹನ್‍ಈಶ್ವರ್ ನಾಯ್ಕ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.