ವಿಧಾನ ಮಂಡಲದ ಅಧಿವೇಶನ ನಡೆಯುವ ಸಮಯದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಂಗಣದ ಪತ್ರಿಕಾ ಗ್ಯಾಲರಿ ಪ್ರವೇಶಿಸಲು ಒದಗಿಸಲಾಗಿರುವ ಪಾಸುಗಳ ಅವಧಿಯು 2025ನೇ ಮಾರ್ಚ್ 31 ಕ್ಕೆ ಮುಕ್ತಾಯವಾಗಿರುತ್ತದೆ.
ಪ್ರಸ್ತುತ 2025-26 ನೇ ಸಾಲಿಗೆ (2025ನೇ ಏಪ್ರಿಲ್ 01 ರಿಂದ 2026ನೇ ಮಾರ್ಚ್ 31ರ ವರೆಗೆ) ಪತ್ರಿಕಾ / ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳಿಗೆ ಕರ್ನಾಟಕ ವಿಧಾನ ಸಭೆಯ ಪತ್ರಿಕಾ ಗ್ಯಾಲರಿಗೆ ಹೊಸದಾಗಿ ಪಾಸುಗಳನ್ನು ವಿತರಿಸುವ ಸಂಬಂಧ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರುವ ಮಾಧ್ಯಮ ಪ್ರತಿನಿಧಿಗಳು ಹಾಗೂ ಮಾಧ್ಯಮ ಮಾನ್ಯತೆ ಹೊಂದಿರದ (Who do not have accreditation card) ಮಾಧ್ಯಮ ಪ್ರತಿನಿಧಿಗಳು ಮಾತ್ರ ಕಡ್ಡಾಯವಾಗಿ ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರದೊಂದಿಗೆ, ಈ ಕೆಳಕಂಡ ಮಾಹಿತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಗೆ ದಿನಾಂಕ 31-05-2025 ಒಳಗಾಗಿ ಸಲ್ಲಿಸುವುದು. (ಡಿಜಿಟಲ್ ಮಾಧ್ಯಮ, ಕೇಬಲ್ ಟಿ.ವಿ ಮಾಧ್ಯಮಗಳು ಹಾಗೂ ಯೂ ಟ್ಯೂಬ್ ವಾಹಿನಿಗಳು ಅರ್ಹರಿರುವುದಿಲ್ಲ)
1. ಮಾಧ್ಯಮ ಸಂಸ್ಥೆ ಹೆಸರು ಮತ್ತು ವಿಳಾಸ (Media Name and Address)
2. ಮಾಧ್ಯಮ ಪ್ರತಿನಿಧಿಯ ಹೆಸರು ಮತ್ತು ಪದನಾಮ (Journalist Name and Designation)
3. ಮೊಬೈಲ್ ದೂರವಾಣಿ ಸಂಖ್ಯೆ (Mobile Number)
4. ಇ-ಮೇಲ್ ವಿಳಾಸ (e-mail address)
5. ಮಾಧ್ಯಮ ಪಟ್ಟಿಯಲ್ಲಿ ಇರುವ ಮಾಧ್ಯಮ ಪ್ರತಿನಿಧಿಗಳು ತಮ್ಮ ಪತ್ರಿಕೆಯು ವಾರ್ತಾ ಮತ್ತು ಸಾರ್ವಜನಿಕ
ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಸೇರಿರುವ ಬಗ್ಗೆ ಕಡ್ಡಾಯವಾಗಿ ದಾಖಲೆ ಒದಗಿಸುವುದು.
6. ನಿಗದಿತ ಸಮಯದ ನಂತರ ಸಲ್ಲಿಸುವ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ.
ವಿಶೇಷ ಸೂಚನೆ :
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಮಾನ್ಯತೆ (Accreditation Card holder) ಹೊಂದಿರುವ ಬೆಂಗಳೂರಿನ ಮಾಧ್ಯಮ ಪ್ರತಿನಿಧಿಗಳು ಮಾಹಿತಿ ಸಲ್ಲಿಸುವ ಅಗತ್ಯವಿಲ್ಲ. ಮಾಧ್ಯಮ ಮಾನ್ಯತಾ ಕಾರ್ಡ್ ಹೊಂದಿರುವವರು ನೇರವಾಗಿ ವಿಧಾನಸಭೆ ಸಚಿವಾಲಯ ಕೊಠಡಿ ಸಂಖ್ಯೆ 128, ಮೊದಲನೆ ಮಹಡಿ, ವಿಧಾನಸೌಧ, ಬೆಂಗಳೂರು ಇಲ್ಲಿಗೆ ಭೇಟಿ ನೀಡಿ ಪಾಸುಗಳನ್ನು ಪಡೆದುಕೊಳ್ಳಬಹುದು.