ನಿತೀಶ್ ಜಿ, ಮೋದಿ ಜಿ, ರೋಕ್ ಸಕೋ ತೋ ರೋಕ್ ಲೋ: ರಾಹುಲ್ ಗಾಂಧಿ

varthajala
0

 



ಪಾಟ್ನಾ: ಬಿಹಾರದ ದರ್ಭಾಂಗದಲ್ಲಿರುವ ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಬಂದಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಪೊಲೀಸರು ತಡೆದಿದ್ದಾರೆ, ಪೊಲೀಸರು ತಡೆಯಲು ಪ್ರಯತ್ನಿಸಿದರೂ ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ವೇದಿಕೆ ಏರಿ, ಭಾಷಣ ಮಾಡಿದ್ದಾರೆ, 

ಇನ್ನೇನು ಬಿಹಾರ ವಿಧಾನಸಭೆ ಚುನಾವಣೆ ಹತ್ತಿರುವಾಗುತ್ತಿದೆ, ಅದ್ದರಿಂದ ಕಾಂಗ್ರೆಸ್ ನಾಯಕರು ಭರ್ಜರಿ ತಯಾರಿ ಮಾಡುತ್ತಿದ್ದಾರೆ, ದರ್ಭಂಗಾದ ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ಕಾಂಗ್ರೆಸ್ ಬೃಹತ್ ಕಾರ್ಯಕ್ರಮ ಆಯೋಜಿಸಿ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲು ಮುಂದಾಗಿದ್ದರು, ಅದರೆ ಜಿಲ್ಲಾಡಳಿತವು ಈ ಕಾರ್ಯಕ್ರಮ ನಡೆಸಲು ಅನುಮತಿ ನೀಡಿರಲಿಲ್ಲ, ಅದರೂ ರಾಹುಲ್ ಗಾಂಧಿ ಸಂವಾದವೂ ಸ್ಧಳೀಯ ಆಡಳಿತ ಸೂಚಿಸಿದ ಸ್ಧಳದಲ್ಲಿ ನಡೆಯಲ್ಲಿ ಪಕ್ಷವು ಆಯ್ಕೆ ಮಾಡಿದ ಸ್ಧಳದಲ್ಲೇ ನಡೆಯಲಿದೆ ಎಂದು ಕಾಂಗ್ರೆಸ್ ಘೋಷಿಸಿತ್ತು, 

ಸರ್ಕಾರದ ಆದೇಶ ಧಿಕ್ಕರಿಸಿ ಬಿಹಾರದ ದರ್ಭಾಂಗದಲ್ಲಿರುವ ಅಂಬೇಡ್ಕರ್ ಹಾಸ್ಟೆಲ್ ಗೆ ತೆರಳುತ್ತಿದ್ದಾಗ ರಾಹುಲ್ ಗಾಂಧಿ ಅವರನ್ನು ಪೊಲೀಸರು ತಡೆದ್ರು, ಆಗ ಮಾತನಾಡಿದ ರಾಹುಲ್ ನಿತೀಶ್ ಜಿ, ಮೋದಿ ಜಿ, ರೋಕ್ ಸಕೋ ತೋ ರೋಕ್ ಲೋ ಎಂದು ರಾಗಾ ಕಿಡಿಕಾರಿದರು,

Post a Comment

0Comments

Post a Comment (0)