ಬೆಂಗಳೂರು: ಕನ್ನಡ ಚಳವಳಿ ಸೇನಾನಿ ಕನ್ನಡ ಬಾವುಟದ ಸೃಷ್ಟಿಕರ್ತ ಮ.ರಾಮಮೂರ್ತಿ ಅವರ ಧರ್ಮಪತ್ನಿ ಶ್ರೀಮತಿ ಕಮಲಮ್ಮ ರಾಮಮೂರ್ತಿ(100) ಅವರು ಸೋಮವಾರ ಮುಂಜಾನೆ ಬನಶಂಕರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ,
ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬನಶಂಕರಿಯಲ್ಲಿ ವ್ಯವಸ್ಧೆ ಕಲ್ಪಿಸಲಾಗಿದೆ
ಹಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ನರಳುತ್ತಿದ್ದ ಕಮಲಮ್ಮ ಕೆಲ ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ಬಿದ್ದು ಗಂಭೀರ ಸ್ಧಿತಿ ತಲುಪಿದ್ದರು, ಅವರ ಸೋದರ ಸಂಬಂಧಿ ಅಮರ್ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು,