ಹೊಸ ರೂಪಾಂತರ ತಳಿ ಪತ್ತೆ- ಹೆಚ್ಚಿದ ಆತಂಕ.!

varthajala
0

 





ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ಕೋವಿಡ್ 19 ಪ್ರಕರಣ ಹೆಚ್ಚಾಗಿದೆ, ಇದೀಗ ಹೊಸ ಎರಡು ರೂಪಾಂತರ ತಳಿಗಳು ಪತ್ತೆಯಾಗಿದ್ದು ಜನರಲ್ಲಿ ಆತಂಕ ಇನ್ನಷ್ಟು ಹೆಚ್ಚಿಸಿದೆ, 

ಭಾರತದಲ್ಲಿ ಕೋವಿಡ್ ಬಳಿಕ ಎನ್ಬಿ1.8.1 ಮತ್ತು ಎಲ್‍ಎಫ್ 7 ರೂಪಾರಂತರಗಳು ತಳಿಗಳು ಪತ್ತೆಯಾಗಿದೆ, ಏಪ್ರಿಲ್ ನಲ್ಲಿ ಎನ್ಬಿ 1.8.1 ಸೋಂಕು ತಮಿಳುನಾಡಿನಲ್ಲಿ ಒಂದು ಸೋಂಕು ಪತ್ತೆಯಾಗಿದ್ದರೆ, ಮೇ ತಿಂಗಳಲ್ಲಿ ನಾಲ್ಕು ಎಲ್‍ಎಫ್.7 ಪ್ರಕರಣಗಳು ಪತ್ತೆಯಾಗಿವೆ 

ವಿಶ್ವ ಆರೋಗ್ಯ ಸಂಸ್ಧೆ ಈ ತಳಿಗಳನ್ನು ಮೇಲ್ವಿಚಾರಣೆಯಲ್ಲಿರುವ ರೂಪಾಂತರಗಳು ಎಂದು ವರ್ಗೀಕರಿಸಲಾಗಿದೆಯೇ ಹೊರತು ಕಾಳಜಿಯ ರೂಪಾಂತರ ಅಥವಾ ಆಸಕ್ತಿಯ ರೂಪಾಂತರ ಎಂದು ವರ್ಗೀಕರಿಸಿಲ್ಲ ಎಂದು ವರದಿ  ಮಾಡಿದೆ, 

ಅಷ್ಟೇ ಅಲ್ಲದೆ ಈ ರೂಪಾಂತರಗಳು ಚೀನಾ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಕೋವಿಡ್ 19 ಪ್ರಕರಣಗಳ ಉಲ್ಬಣದ ಹಿಂದೆ ಇವೆ ಎಂದು ವಿಶ್ವ ಆರೋಗ್ಯ ಸಂಸ್ಧೆ ತಿಳಿಸಿದೆ, ಇನ್ನು ಇಡೀ ದೇಶದಲ್ಲಿ ಕೇರಳದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ, 

ಕೋವಿಡ್ 10 ಪ್ರಕರಣದಲ್ಲಿ ದೇಶದಲ್ಲಿ 273 ಕೇಸ್ ಗಳು ಪತ್ತೆಯಾಗಿದ್ದು, ಇದರಲ್ಲಿ ಮಹಾರಾಷ್ಟ್ರ ಹಾಗೂ ತಮಿಳು ನಾಡಿನಲ್ಲಿ ಸೋಂಕು ಏರಿಕೆಯಗುತ್ತಿದೆ, 

Tags

Post a Comment

0Comments

Post a Comment (0)