"ಅತ್ಯುತ್ತಮ ಕಿರುಚಿತ್ರ" ವಿದ್ಯಾ ಲವ್ಸ್ ವಿಶ್ವ
ಬೆಂಗಳೂರು : ವಿಜಯಪುರ ಜಿಲ್ಲೆಯ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ನಟಿಸಿ ನಿರ್ದೇಶಿಸಿರುವ "ವಿದ್ಯಾ ಲವ್ ವಿಶ್ವ" ಕಿರುಚಿತ್ರಕ್ಕೆ "ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ" (ಬೆಸ್ಟ್ ಶಾರ್ಟ ಫೀಲಂ ಅವಾರ್ಡ) ಲಭಿಸಿದೆ.
ಇತ್ತೀಚೆಗೆ ಕೊಪ್ಪಳ ನಗರದ ಜೆಕೆಎಸ್ ಹೊಟೇಲ್ ನಲ್ಲಿ ಕವಿತಾ ಮೀಡಿಯಾ ಸೋರ್ಸ್ ಆಯೋಜಿಸಿದ್ದ ಕಿರುಚಿತ್ರೋತ್ಸವ ಸಿಜನ್ -2 ರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದ್ದು, ಅದರಲ್ಲಿ ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ವಿದ್ಯಾ ವಿಶ್ವ ಕಿರುಚಿತ್ರ ಪ್ರಶಸ್ತಿ ಪಡೆದಿದೆ.
ಕಿರುಚಿತ್ರೋತ್ಸವದಲ್ಲಿ ನಿರ್ದೇಶಕ ಬಸವರಾಜ ಕೊಪ್ಪಳ, ಪತ್ರಕರ್ತ ಶರಣಬಸವ ಹುಲಿಹೈದರ, ಕಿರುಚಿತ್ರೋತ್ಸವ ನಿಕಟಪೂರ್ವ ಅಧ್ಯಕ್ಷ ಡಾ.ಮಹಾಂತೇಶ ಮಲ್ಲನಗೌಡರ, ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್, ಶರಣಬಸಪ್ಪ ಬಿಳಿಯಲಿ, ಭೀರಪ್ಪ ಅಂಡಗಿ, ನಾಗರಾಜ ಗುಡಿ, ಮುತ್ತಣ್ಣ ಧರ್ಮಂತಿ, ಬಿ ಎನ್ ಹೊರಪೇಟಿ, ಪ್ರೀಯದರ್ಶಿನಿ ಮುಂಡರಗಿಮಠ, ಕೆ ಎಂ ಖಲೀಲ್ ಕಾರ್ಕಳ, ನಟ ಪ್ರೀತಮ್ ವೇದಿಕೆ ಮೇಲಿದ್ದರು.