ಬಂಜಾರ ಸಮುದಾಯದ ಪ್ರಗತಿಪರ ಚಿಂತಕರು, ವಿದ್ವಾಂಸರು, ಕಲಾವಿದರು ಹಾಗೂ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಸರ್ಕಾರ ನಡೆಸುತ್ತಿರುವ ಒಲಮೀಸಲಾತಿ ವರ್ಗಿಕರಣ ಜನಗಣತಿ ಕುರಿತು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತುರ್ತು ಪತ್ರಿಕಾ ಗೋಷ್ಠಿ ಯಲ್ಲಿ ಹಿರಿಯ ರಂಗ ತಜ್ಞ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರು, ಕರ್ನಾಟಕ ಬಂಜಾರ ಹಕ್ಕು ಹೋರಾಟ ಸಮಿತಿ ಗೌರವ ಸಲಹೆ ಗಾರರಾದ ಡಾ. ಎ. ಅರ್. ಗೋವಿಂದ ಸ್ವಾಮಿ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿ ಸ್ವಾತಂತ್ರ್ಯ ನಂತರ ಪ್ರಥಮ ಬಾರಿಗೆ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವ ದ ಸರ್ಕಾರ ಜಾತಿ ಜನಗಣತಿ ಹಮ್ಮಿಕೊಳ್ಳುವುದರ ಮುಖಾಂತರ ಇತಿಹಾಸ ನಿರ್ಮಿಸಿದ್ದಾರೆ. ಇದು ದೇಶದಲ್ಲಿ ದಲಿತ, ಹಿಂದುಳಿದ, ಅಲ್ಪ ಸಂಖ್ಯಾತ, ಅಲೆಮಾರಿ, ಬುಡಕಟ್ಟು ಅದಿವಾಸಿಗಳಂತಹ ನೂರಾರು ತಳ ಸಮುದಾಯದ ಮಕ್ಕಳ ಭವಿಷ್ಯಕ್ಕೆ, ಸಾಮಾಜಿಕ, ಶೈಕ್ಷನಿಕ ಪ್ರಗತಿಗೆ ಸಹಕಾರಿ ಯಾಗಲಿದೆ. ಆದರೆ ನೋವಿನ ಸಂಗತಿಯಂದರೆ ಕೆಲವು ಬಲಿಷ್ಠ ಸಮುದಾಯದ ಹಿನ್ನಲೆಯ ಶಿಕ್ಷಕರು ಜನಗಣತಿ ಸಮೀಕ್ಷೆಯಲ್ಲಿ ಅವಿದ್ಯಾವಂತರು ವಾಸಿಸುವ ತಂಡಾಗಳಲ್ಲಿ ತಮ್ಮ ಬಲಿಷ್ಠ ಸಮುದಾಯದ ಪರವಾಗಿ ದಾಖಲಾತಿ ಯನ್ನು ಸಮೀಕ್ಷೆ ಯಲ್ಲಿ ದಾಖಲಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಉದಾಹರಣೆ ರಾಯಚೂರು ಜಿಲ್ಲೆ, ಲಿಂಗಸಗೂರು ತಾಲ್ಲೂಕಿನ, ಹೆಗ್ಗಪುರ ತಾಂಡಾ ದಲ್ಲಿ ವಾಸಿಸುವ 80ಕುಟುಂಬ ದಲ್ಲಿ ಇದೆ ತಾಂಡಾದ ಶಾಲೆಯ ಶಿಕ್ಷಕ ಸೋಮಪ್ಪ ಎನ್ನುವವರು ಒಂದೇ ದಿನ ಆದಿ ಆಂಧ್ರ ಎಂದು ಉದ್ದೇಶ ಪೂರ್ವಕವಾಗಿ ದಾಖಲಿಸಿ ಕರ್ತವ್ಯ ಲೋಪ ಎಸಗಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಧರಣಿ ನಡೆಸಿದ್ದಾರೆ. ಇವರು ಮಾಡಿರುವ ಹುನ್ನಾರ ಸರ್ಕಾರ ಮತ್ತು ಆಯೋಗದ ಜನಪರ ಉದ್ದೇಶಕ್ಕೆ ಸಂಚಾಕರ ತಂದಿದೆ. ಈ ಸಂಬಂಧ ಪಾರದರ್ಶಕ ಕ್ರಮ ಕೈಗೊಳ್ಳಲು ಸರ್ಕಾರ ಮತ್ತು ಆಯೋಗ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂಬಂಧ ಪಾರದರ್ಶಕವಾಗಿ ಜನಗಣತಿ ನಡೆಸಲು ಸ್ಥಳೀಯ ಯುವಕರು ವಿದ್ಯಾವಂತರು ಕ್ರಮ ವಹಿಸಬೇಕೆಂದು ಮನವಿ ಮಾಡಿದರು. ಹೋರಾಟ ಸಮಿತಿ ಸದಸ್ಯ ಡಾ. ಡಿ. ಪರಮೇಶ್ ನಾಯ್ಕ್ ಮಾತನಾಡಿ ಕೆಲವು ತಾಂಡಾ ಗಳ ಅನಕ್ಷರಸ್ತ ಬಂಜಾರರು ಬೇರೆ ರಾಜ್ಯಗಳ ಕಬ್ಬು, ಕಾಫಿ ತೋಟ ಗಳ ಮಾಲೀಕರ ಜೊತೆ 6 ತಿಂಗಳ ಕಾಲ ಒಡಂಬಡಿಕೆಯಲ್ಲಿ ಕೆಲಸ ನಿರ್ವಹಿಸುವುದರಿಂದ ಅಂಥವರು ಸ್ವಗ್ರಾಮಕ್ಕೆ ದಸರಾ ದೀಪಾವಳಿ ಯಲ್ಲೆ ವಾಪಸ್ಸು ಬರುವುದು ವಾಡಿಕೆ ಆದ್ದರಿಂದ ಸರ್ಕಾರ ಸಮೀಕ್ಷೆ ತಂಡಕ್ಕೆ ಮಾಹಿತಿ ಪಡೆಯಲು ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು. ಮಾಜಿ ಸಚಿವೆ ಬಿ ಟಿ ಲಲಿತಾ ನಾಯ್ಕ್ ಮಾತನಾಡಿ ಮಾಡಿ ಜನಗಣತಿ ಅಂಕಿ ಅಂಶ ಪಾರದರ್ಶಕ ವಾಗಿ ಪಡೆಯದಿದ್ದರೆ ಅದನ್ನು ತಿರಸ್ಕರಿಸಲು ಹೋರಾಟ ಮಾಡುತ್ತೇವೆ ಎಂದು ಅಗ್ರಹಿಸಿದರು.
ಸಮಿತಿ ಅಧ್ಯಕ್ಷ ರಾಜಾ ನಾಯ್ಕ್ ಮಾತನಾಡಿ ಕೇಂದ್ರ ಸರ್ಕಾರ ನೆಡೆಸುವ ಜಾತಿ ಜನಗಣತಿ ನಿಕರವಾಗಿದ್ದು ರಾಜ್ಯ ಸರ್ಕಾರ ನಡೆಸುವ ಜನಗಣತಿಗೆ ಮಾನ್ಯತೆ ಇಲ್ಲ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಧರ್ಮರಾಜ್ ನಾಯ್ಕ್, ಅಶೋಕ್ ನಾಯ್ಕ್ ಉಪಸ್ಥಿತರಿದ್ದರು.