ಬೆಂಗಳೂರು, ಮೇ 6 (ಕರ್ನಾಟಕ ವಾರ್ತೆ):
2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಕೆಜಿಬಿವಿ, ಕೆಕೆಜಿಬಿವಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸೀಯ ವಿದ್ಯಾಲಯ ವಸತಿ ಶಾಲೆ / ನಿಲಯಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ದಾಖಲಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು 2025 ಮೇ 02 ರಿಂದ 20 ರವರೆಗೆ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಿಗದಿಪಡಿಸಿದ್ದು, ಪ್ರವೇಶಾತಿ ಬಯಸುವ ತರಗತಿಗಳಿಗೆ ಆಯಾ ವಸತಿ ಶಾಲೆಗಳಲ್ಲಿ ಆಪ್‍ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಆಸಕ್ತ ವಿದ್ಯಾರ್ಥಿಗಳು ಸಮಗ್ರ ಶಿಕ್ಷಣ ಕರ್ನಾಟಕದ ವಿದ್ಯಾವಾಹಿನಿ ತಂತ್ರಾಂಶದ ಆನ್‍ಲೈನ್ ಲಿಂಕ್ https://vidyavahini.karnataka. gov.in ಅಥವಾ ಆಪ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಕೂರ್ಮಾ ರಾವ್ ಮಿಟ್ಟಿರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.