ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದ ಗರ್ಭಿಣಿಗೆ ಯಶಸ್ವಿ ಹೆರಿಗೆ

varthajala
0


 ಗರ್ಭಿಣಿ ಮಹಿಳೆಯರ ಆರೋಗ್ಯದಲ್ಲಿ ಒಂದು ಸಣ್ಣ ಏರುಪೇರು ಉಂಟಾದರೂ ಅದು ದೊಡ್ಡ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಈ ಪೈಕಿ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ರಕ್ತಹೀನತೆ ಸಮಸ್ಯೆಯು ಅತೀ ಆತಂಕಕಾರಿ ಸಂದರ್ಭ. ಮಹಿಳೆಯೊಬ್ಬರು ತಮ್ಮ ಮೊದಲ ಗರ್ಭಧಾರಣೆ ಸಂದರ್ಭದಲ್ಲಿ ರಕ್ತಹೀನತೆಯಿಂದಾಗಿ ವೆಂಟಿಲೇಟರ್‌ ಸಹಾಯದಿಂದ ತಿಂಗಳ ಕಾಲ ಚಿಕಿತ್ಸೆಯನ್ನು ಪಡೆದಿದ್ದರು. ಆಕೆ ಮತ್ತೊಮ್ಮೆ ಗರ್ಭಿಣಿಯಾದಾಗ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವ ಸಾಧ್ಯತೆಯಿತ್ತು. ಆದರೆ ತಾಯಿ ಮಗುವಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಸಮಯದಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಿರುವ ಘಟನೆ ನಗರದ ವಾಸವಿ ಆಸ್ಪತ್ರೆಯಲ್ಲಿ ಜರುಗಿದೆ.


ಸಿಕಲ್‌ ಸೆಲ್‌ ಅನೀಮಿಯಾ ಎಂದು ಕರೆಯಲ್ಪಡುವ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯು ತಮ್ಮ ಮೊದಲ ಗರ್ಭಾವಸ್ಥೆಯಲ್ಲಿ  ಸಂದಿಗ್ಧ ಸಮಸ್ಯೆಯನ್ನು ಎದುರಿಸಿದ್ದರು. ಸಿಜೇರಿಯನ್‌ ಮಾಡಿದ ನಂತರ ಮಹಿಳೆಗೆ ಒಂದು ತಿಂಗಳ ಕಾಲ ಐಸಿಯು ನಲ್ಲಿ ವೆಂಟಿಲೇಟರ್‌ ಸಹಾಯದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೆ ಎರಡನೇ ಗರ್ಭಧಾರಣೆಯ ವೇಳೆ ಎದುರಾಗುವ ತೊಡಕುಗಳ ಕುರಿತು ವೈದ್ಯರು ಎಚ್ಚರಿಕೆಯನ್ನು ನೀಡಿದ್ದರು.  ಆದರೂ ಸಹ  ಮಹಿಳೆಯು ಅಪಾಯವನ್ನು ಎದುರಿಸಲು ಸಿದ್ದರಾಗಿ ಐದು ವರ್ಷಗಳ ಬಳಿಕ ಮತ್ತೆ ಗರ್ಭಿಣಿಯಾದರು. ಈ ನಡುವೆ ಮಹಿಳೆಯು ಗರ್ಭಪಾತವನ್ನು ಕೂಡ ಮಾಡಿಸಿಕೊಂಡಿದ್ದರು. ಈ ಅಪಾಯಗಳ ನಡುವೆಯೂ ಅವರು ಎರಡನೇ ಮಗುವಿಗೆ ಜನ್ಮ ನೀಡಲು ಮುಂದಾಗಿದ್ದರು. ಇದನ್ನರಿತ ವಾಸವಿ ಆಸ್ಪತ್ರೆಯ ವೈದ್ಯರ ತಂಡವು ಭ್ರೂಣದ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ನೋಡಿಕೊಳ್ಳಲು ಹೆಚ್ಚು ಗಮನವಹಿಸಿದೆವು ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಸ್ತ್ರೀರೋಗತಜ್ಞೆ ಮತ್ತು ಪುಸೂತಿ ತಜ್ಞರಾದ ಡಾ. ನಿಶಾ ಬುಚಾಡೆ ಹೇಳಿದ್ದಾರೆ.  

ಇಂತಹ ಸಂದರ್ಭದಲ್ಲಿ ತಾಯಿಯಲ್ಲಿ ಕಾಣಿಸಿಕೊಳ್ಳುವ ಫ್ರಿಕ್ಲಾಂಪ್ರಿಯಾ, ಡೀಪ್ ವೇನ್ ಥಂಬೋಸಿಸ್ (ಡಿವಿಟಿ), ಪಲ್ಮನರಿ ಎಂಬಾಲಿಸಮ್, ತೀವ್ರ ರಕ್ತಹೀನತೆ, ಅಂಗ ಹಾನಿ, ಶ್ವಾಸಕೋಶದ ಸೋಂಕುಗಳು ಮತ್ತು ಮೂತ್ರನಾಳದ ಸೋಂಕುಗಳು ಸೇರಿದಂತೆ ಹಲವಾರು ಸಂಭಾವ್ಯ ತೊಡಕುಗಳು ಬಾರದಂತೆ ವೈದ್ಯರು ಹೆಚ್ಚಿನ ಕಾಳಜಿವಹಿಸಿದರು. ಜೊತೆಗೆ ಈ ಸಂದರ್ಭದಲ್ಲಿ ಮಗುವಿನಲ್ಲಿ ಎದುರಾಗಬಹುದಾದ ಉಸಿರಾಟದ ತೊಂದರೆ, ಅಕಾಲಿಕ ಜನನ, ಕಾಮಾಲೆಯಂತಹ ಆರೋಗ್ಯ ಸಮಸ್ಯೆಗಳು ಬಾರದಂತೆ ವೈದ್ಯರ ತಂಡ ಮುನ್ನೆಚ್ಚರಿಕೆ ವಹಿಸಿತು. ಇದರ ಪರಿಣಾಮ ತಾಯಿಯು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ವೈದ್ಯರ ಸಮಯೋಚಿತ ಕಾಳಜಿಯಿಂದ ಯಶಸ್ವಿಯಾಗಿ ಹೆರಿಗೆಯಾಗಿದ್ದು, ಆರೋಗ್ಯಕರ 2.6 ಕೆ.ಜಿ ತೂಕದ ಹೆಣ್ಣು ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ. ತಾಯಿ, ಮಗು ಇಬ್ಬರೂ ಯಾವುದೇ ತೊಂದರೆಗಳಿಲ್ಲದೆ ಹೆರಿಗೆಯಾದ ಮೂರನೇ ದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಇದೊಂದು ಅಸಾಧಾರಣ ಸಂದರ್ಭವಾಗಿದ್ದು, ಅತ್ಯಂತ ಕಾಳಜಿಯುತವಾಗಿ ಚಿಕಿತ್ಸೆ ನೀಡಿ ಯಶಸ್ವಿಯಾದೆವು ಎಂದು ಸ್ತ್ರೀರೋಗತಜ್ಞೆ ಡಾ. ನಿಶಾ ಬುಚಾಡೆ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364466240, 6364409651.

Post a Comment

0Comments

Post a Comment (0)