ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಶುರು- ಐದು ದಿನ ಪರ್ಯಾಯ ಮಾರ್ಗಕ್ಕೆ ಸಲಹೆ!

varthajala
0

 




ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸವಾರರಿಗೆ ಮೇಜರ್ ಅಪ್ಡೇಟ್ ಸಿಕ್ಕಿದ್ದು ಹೆಬ್ಬಾಳ ಫ್ಲೈ ಓವರ್ ನಲ್ಲಿ ಬಿಡಿಎ ಕಾಮಗಾರಿಯಿಂದಾಗಿ ಮೇ 17 ರಿಂದ 21 ರವರೆಗೆ ಪ್ರತಿದಿನ ಮಧ್ಯರಾತ್ರಿ 12 ರಿಂದ 3 ರವರೆಗೆ ಫ್ಲೈಓವರ್ ಬಂದ್ ಆಗಲಿದೆ,
ಹಬ್ಬಾಳ ಮೇಲ್ಸೇತುವೆಗೆ ಹೆಚ್ಚುವರಿ ಕ್ಯಾಂಪ್ ಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ, ಈ ಕಾಮಗಾರಿಯ ಭಾಗವಾಗಿ ರೈಲ್ವೆ ಹಳಿಗಳ ಮೇಲೆ 33.5 ಮೀ ಉದ್ದದ 7 ಉಕ್ಕಿನ ಗಡ್ರ್ರಗಳನ್ನು ಅಳವಡಿಸಲಾಗುತ್ತಿದ್ದು, ಈ ಹಿನ್ನೆಲೆ ಸಂಚಾರ ಬಂದ್ ಆಗಲಿದೆ,
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಪೀಮ್ ಮಾಲ್ ನಲ್ಲಿರುವ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲಕ್ಕೆ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಚಲಿಸಿ ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದ ನ್ಯೂ ಬಿಇಎಲ್ ರಸ್ತೆ ಮೂಲಕ ಮೇಖ್ರಿ ವೃತ್ತವನ್ನು ತಲುಪಬಹುದಾಗಿದೆ ,
ಇದೇ ಮಾರ್ಗವನ್ನು ಬಳಸುವಂತೆ ಸಾರ್ವಜನಿಕರರಲ್ಲಿ ಕೋರಲಾಗಿದೆ,

Tags

Post a Comment

0Comments

Post a Comment (0)