ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಆಸ್ಪತ್ರೆ ವೆಚ್ಚಗಳು ಕೂಡ ಗಗನಕ್ಕೇರುತ್ತಿದೆ, ಹೀಗಾಗಿ ಬಹುತೇಕರು ಭವಿಷ್ಯದ ಮೇಲಿನ ಮುಂದಾಲೋಚನೆಯಿಂದ ಆರೋಗ್ಯ ವಿಮೆ ಖರೀದಿಸುತ್ತಿದ್ದಾರೆ,
ಅದರಲ್ಲೂ ಭಾರತದಲ್ಲಿ ಆರೋಗ್ಯ ವಿಮಾ ಖರೀದಿದಾರರಲ್ಲಿ ಸುಮಾರು ಅರ್ಧದಷ್ಟು ಜನರು ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳಿಂದ ರಕ್ಷಿಸಿಕೊಳ್ಳಲು ಪಾಲಿಸಿಗಳನ್ನು ಖರೀದಿಸುತ್ತಾರೆ ಎಂದು ಹನ್ಸಾ ರಿಸರ್ಚ್‍ನ ಇತ್ತೀಚಿನ ಆರೋಗ್ಯ ವಿಮಾ ವರದಿ ತಿಳಿಸಿದೆ,
ಆರೋಗ್ಯ ವಿಮೆಯನ್ನು ಕೇವಲ ತಮ್ಮ ಆರ್ಥಿಕ ಬೆಂಬಲವಾಗಿ ಮಾತ್ರವಲ್ಲದೇ ಭವಿಷ್ಯದ ಆರೋಗ್ಯದ ಹಿತದೃಷ್ಟಿಯಿಂದ ಕೂಡ ಜನ ನೋಡುತ್ತಿದ್ದಾರೆ, ವೈದ್ಯಕೀಯ ಕ್ಷೇತ್ರದ ಹಣದುಬ್ಬರವು ಆರೋಗ್ಯ ವಿಮೆ ಗ್ರಾಹಕರ ಪ್ರಮುಖ ಕಾಳಜಿಯಾಗಿದೆ ಎಂದು ಈ ವರದಿ ತೋರಿಸಿದೆ, ಸುಮಾರು ಶೇ.30 ರಷ್ಟು ಪಾಲಿಸಿದಾರರು ಅದರಲ್ಲೂ ಕಾರ್ಪೊರೇಟ್ ವಿಭಾಗದಲ್ಲಿ ಕೆಲಸ ಮಾಡುವವರು ಪಾಲಿಸಿಗಳನ್ನು ಆರೋಗ್ಯದ ಹಿತದೃಷ್ಟಿಯಿಂದಲೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ,
ಭಾರತದಲ್ಲಿ ಆರೋಗ್ಯ ವಿಮಾ ಮಾರುಕಟ್ಟೆಯ ಸಾರ್ವಜನಿಕ ವಲಯದ ವಿಮಾದಾರರು ಖಾಸಗಿ ಕಂಪನಿಗಳು ಮತ್ತು ಇತರ ಆರೋಗ್ಯ ವಿಮಾ ಪೂರೈಕೆದಾರರಿಂದ ಹೆಚ್ಚು ಸ್ಪರ್ಧಾತ್ಮಕವಾಗಿರುವುದರಿಂದ ಪಾಲಿಸಿಗಳನ್ನು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಹಾಗೂ ಅವರ ಅನುಭವಕ್ಕೆ ತಕ್ಕಂತೆ ರಚಿಸುವುದು ಮುಖ್ಯವಾಗಿದೆ,
ಹೆಚ್ಚುತ್ತಿರುವ ಪ್ರೀಮಿಯಂಗಳು ಕಳಪೆ ಕ್ಲೈಮ್ ಸೇರಿದಂತೆ ಆರೋಗ್ಯ ವಿಮೆಯಲ್ಲಿ ಸದ್ಯ ಸಾಕಷ್ಟು ಸವಾಲುಗಳಿದ್ದು, ಗ್ರಾಹಕರು ಕೂಡ ತಮ್ಮ ಅನುಕೂಲಕ್ಕೆ ತಕ್ಕಂತೆ ಅದರಲ್ಲೂ ಆಸ್ಪತ್ರೆ ಸೌಲಭ್ಯಗಳನ್ನು ಹೆಚ್ಚು ನೀಡುವ ವಿಮೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ,