ದುಬಾರೆಯಲ್ಲಿ ರಿವರ್ ರಾಫ್ಟಿಂಗ್... ಇದು ಮಳೆಗಾಲದ ಸ್ಪೆಷಲ್...

varthajala
0
ಈ ಬಾರಿ ಯಾರೂ ಊಹಿಸದ ರೀತಿಯಲ್ಲಿ ಮುಂಗಾರು ಆರಂಭದ ಹೊತ್ತಿನಲ್ಲಿಯೇ ಭಾರಿ ಮಳೆ ಸುರಿದಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಬಹುಶಃ ನಡು ಮಳೆಗಾಲದಲ್ಲಿಯೂ ಇಷ್ಟೊಂದು ಮಳೆ ಸುರಿಯುವುದಿಲ್ಲವೇನೋ? ಅಷ್ಟರ ಮಟ್ಟಿಗೆ ಮಳೆ ಸುರಿದಿದ್ದು, ನದಿ, ಜಲಪಾತ, ಹಳ್ಳಕೊಳ್ಳಗಳಲ್ಲಿ ಜೀವಕಳೆ ತಂದಿದೆ. ಬೇಸಿಗೆಯಲ್ಲಿ ನೀರಿನ ಮಟ್ಟ ಕುಸಿತ ಕಂಡಿದ್ದ ಕಾವೇರಿ ನದಿ ಇದೀಗ ಧುಮ್ಮಿಕ್ಕಿ ಹರಿಯಲು ಆರಂಭಿಸಿದೆ. ಹೀಗಾಗಿ ಕೊಡಗಿನ ದುಬಾರೆಯಲ್ಲಿ ಮತ್ತೆ ರಿವರ್ ರಾಫ್ಟಿಂಗ್ ಶುರುವಾಗಿದೆ. ಭೋರ್ಗರೆಯುವ ನದಿಯಲ್ಲಿ ಸಾಹಸಮಯ ಕ್ರೀಡೆ ನೋಡುಗರ ಮೈಜುಮ್ಮೆನಿಸಿದರೆ, ರಾಫ್ಟಿಂಗ್ ನಲ್ಲಿ ವಿಹಾರ ಮಾಡುವವರಿಗೆ ಮರೆಯಲಾರದ ಅನುಭವ ನೀಡುತ್ತಿದೆ. https://janamanakannada.com/riverraptingdubare/

Post a Comment

0Comments

Post a Comment (0)