ಬೀಜಿಂಗ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ, ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಆಧುನಿಕ ರಕ್ಷಣಾ ವ್ಯವಸ್ಧೆಗಳನ್ನು ಬಳಸಿಕೊಂಡು ಪಾಕಿಸ್ತಾನ ಊಹಿಸಿದ ರೀತಿಯಲ್ಲಿ ಭಾರತ ಪಾಠ ಕಲಿಸಿದೆ, ಭಾರತ-ಪಾಕಿಸ್ತಾನ ಸಂಘರ್ಷಕ್ಕೆ ಸದ್ಯ ಬ್ರೇಕ್ ಹಾಕಲಾಗಿದ್ದು ಕದನ ವಿರಾಮ ಘೋಷಿಸಿಲಾಗಿದೆ,
ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡುತ್ತಿದ್ದು ತನ್ನಲ್ಲಿನ ಆಧುನಿಕ ರಕ್ಷಣಾ ವ್ಯವಸ್ಧೆಯನ್ನು ಪಾಕ್ ಗೆ ರವಾನಿಸುತ್ತಿದೆ, ಇದೀಗ ಚೀನಾ ತನ್ನ ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್ ಗಳನ್ನು ಪಾಕಿಸ್ತಾನಕ್ಕೆ ಉಡುಗೊರೆಯಾಗಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದು ವರದಿಯಾಗಿದೆ,
ಈ ವರ್ಷದ ಆಗಸ್ಟ್ ನಲ್ಲಿ ಚೀನಾದ ಮೂವತ್ತು ಜೆಟ್ ಗಳು ಪಾಕಿಸ್ತಾನ ತಲುಪಲಿದೆ, ಚೀನಾ ಪಾಕಿಸ್ತಾನಕ್ಕೆ ಫೈಟರ್ ಜೆಟ್ ಗಳ ಮೇಲೆ 50 % ರಿಯಾಯಿತಿಯನ್ನು ನೀಡುವುದರ ಜೊತೆಗೆ ಸುಲಭ ಪಾವತಿ ಆಯ್ಕೆಗಳನ್ನು ನೀಡಿದೆ,