ಬೆಂಗಳೂರು, ಏ, 29; ಅಂತಾರಾಷ್ಟ್ರೀಯ ನೃತ್ಯ ದಿನದ ಹಿನ್ನೆಲೆಯಲ್ಲಿ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥೆಯಿಂದ ವಿಶ್ವದಾಖಲೆ ನಿರ್ಮಿಸುವ ವಿಶೇಷ ಪ್ರಯತ್ನ ನಗರದ ಬಸವನಗುಡಿಯ ಬಿಪಿ ವಾಡಿಯಾದ ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ಆರ್ಟ್ ಕಲ್ಚರ್ ಸಭಾಂಗಣದಲ್ಲಿಂದು ನಡೆಯಿತು.
ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕರಾದ ಅಂಬಿಕಾ ಸಿ ನೇತೃತ್ವದಲ್ಲಿ ಮಕ್ಕಳು ನೂತನ ದಾಖಲೆ ಬರೆಯುವ ಪ್ರಯತ್ನ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ನೃತ್ಯ ಅಭಿಮಾನಿಗಳು, ಪೋಷಕರು ಸಹ ಭಾಗವಹಿಸಿ ದಾಖಲೆಯ ಹೊಸ್ತಿಲಲ್ಲಿರುವವರನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ನಟ, ನಿರ್ಮಾಪಕ, ಭಾರತ ಸಾರಥಿ ಪತ್ರಿಕೆ ಸಂಪಾದಕರಾದ ಗಂಡಸಿ ಸದಾನಂದ ಸ್ವಾಮಿ, ಪತ್ರಕರ್ತರಾದ ನಂಜುಂಡಪ್ಪ.ವಿ. ಶಾಂತಕುಮಾರಿ, ಸಮಾಜ ಸೇವಕರಾದ ಶ್ರೀಧರ್, ಬದ್ರಿನಾಥ್ ಮತ್ತಿತರರು ಉಪಸ್ಥಿತರಿದ್ದು, ಸಮಾರಂಭದಲ್ಲಿ ನೃತ್ಯ ಕ್ಷೇತ್ರದಲ್ಲಿ ಗಣನೀಯವಾದ ಸಾಧನೆಗೈದ ವಿದ್ವಾನ್ ಮಂಜುನಾಥ್ ಎಸ್, ಶ್ವೇತಾ, ಸ್ವಪ್ನಾ, ನೀತಾ, ಕಿಶೋರ್, ಮಾನ್ಯ ಮುಂತಾದ ಶಿಕ್ಷಕರುಗಳಿಗೆ ಮತ್ತು ಕುಮಾರಿ ಸೋನಾಲ್ ಎಸ್ ಪೂಜಾರಿ ರವರುಗಳಿಗೆ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.