ಪಹಲ್ಗಾಮ್ ದಾಳಿ ಆದಾಗಿನಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಹಲ್ಗಾಮ್ ದಾಳಿಯ ನಂತರ, ಪಾಕಿಸ್ತಾನವು ಭಾರತದಿಂದ ದಾಳಿಯ ಭಯದಲ್ಲಿದೆ. ಈ ಮಧ್ಯೆ ತನಿಖೆಯಲ್ಲಿ ಎನ್ಐಎಗೆ ಮಹತ್ವದ ಸುಳಿವು ಸಿಕ್ಕಿದೆ. ಇದರಲ್ಲಿ ಪಾಕಿಸ್ತಾನ ಪಿತೂರಿ ಬಹಿರಂಗವಾಗಿದೆ.
ಪಹಲ್ಗಾಮ್ ದಾಳಿಯಲ್ಲಿ (Pahalgam Attack) ನಡೆದ ಹಿಂದೂ ಹತ್ಯಾಕಾಂಡ ಇಡೀ ದೇಶವನ್ನೇ ಕೆರಳಿಸಿದೆ. ಭಯೋತ್ಪಾದಕರಿಗೆ ಸಹಾಯ ಮಾಡುತ್ತಿರುವ ಶತ್ರುರಾಷ್ಟ್ರ ಪಾಕಿಸ್ತಾನ (Pakistan) ವಿರುದ್ಧ ದೇಶದ ಜನ ಕೆಂಡಮಂಡಲರಾಗಿದ್ದಾರೆ. ಪಾಕಿಸ್ತಾನವನ್ನು ಬಗ್ಗು ಬಡೆಯುವಂತೆ ಭಾರತ ಸರ್ಕಾರಕ್ಕೆ (Indian Government) ಮನವಿ ಮಾಡಿದ್ದಾರೆ. ಜೊತೆಗೆ ಭಯೋತ್ಪಾದಕ ದಾಳಿ ತನಿಖೆಯನ್ನು ಎನ್ಐಎ (NIA Investigation) ವಹಿಸಿಕೊಂಡಿದ್ದು, ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದೆ.
ಎನ್ಐಎ ತನಿಖೆಯಲ್ಲಿ ಪಾಕಿಸ್ತಾನದ ಕರಾಳ ಮುಖ ಬಯಲಾಗುತ್ತಿದೆ. ಪಹಲ್ಗಾಮ್ ದಾಳಿಯನ್ನು ನಡೆಸಿದ ಭಯೋತ್ಪಾದಕರು ಪಾಕಿಸ್ತಾನ ಮತ್ತು ಅದರ ಗೂಢಚಾರ ಸಂಸ್ಥೆ ಐಎಸ್ಐನವರು ಎಂಬುದು ಬಯಲಾಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಈಗ ಭಾರತ ಭಯೋತ್ಪಾದಕರ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ, ಇದರಿಂದ ಅವರು ಇಡೀ ಪ್ರಪಂಚದ ಮುಂದೆ ರೆಡ್ ಹ್ಯಾಂಡ್ ಆಗಿ ಬಹಿರಂಗಗೊಳ್ಳಬಹುದು. ಈ ದಿಕ್ಕಿನಲ್ಲಿ, ತನಿಖಾ ಸಂಸ್ಥೆ NIA ದೊಡ್ಡ ಯಶಸ್ಸನ್ನು ಕಂಡಿದೆ.