ಗಾಂಧಿಭವನ: ಸ್ವಚ್ಚ ಪರಿಸರ 10ನೇ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಅಭಿನಂದನಾ ಸಮಾರಂಭ ಮತ್ತು ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ.
ಕಾರ್ಯಕ್ರಮವನ್ನು ಪತ್ರಿಕೆ ಸಂಪಾದಕರಾದ ಅರವಿಂದ ಯೋಗರಾಜು, ಗೌರವ ಸಂಪಾದಕರಾದ ಲಯನ್ ಆರ್.ವೆಂಕಟೇಶ್ ರವರು, ಉಪ ಸಂಪಾದಕರಾದ ಶ್ರೀನಿವಾಸ್ ಹಿರಿಯ ವೈದ್ಯರಾದ ಡಾ||ಅಂಜನಪ್ಪರವರು, ರಘುನಾಥ್, ರಘು ರಾಮಕೃಷ್ಣ, ಹಯಾತ್ ಬೇಗ್ ಗಿರೀಶ್ ರವರು, ಪ್ರವೀಣ್ ಜೆಕೆ, ರವಿಶಂಕರ್,ಜಿ.ಎಸ್.ಗೋಪಾಲ್ ರಾಜ್, ರವಿಕುಮಾರ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಡಾ||ಅಂಜನಪ್ಪರವರು ಮಾತನಾಡಿ ಸಮಾಜದ ಅಂಕುಡೊಂಕುಗಳು ತಿದ್ದುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ. ಕೈ ತೊಳೆಯುವುದರಿಂದ ಆರೋಗ್ಯವನ್ನು ಕಾಪಾಡಬಹುದು. ಊಟ,ತಿಂಡಿ ಮತ್ತು ಅಪರೇಷನ್ ಎಲ್ಲ ಸಮಯದಲ್ಲಿ ಕೈ ತೊಳೆಯಬೇಕು. ರೈತನ ಮಕ್ಕಳು ಮುಂದೆ ಬರಬೇಕು, ರೈತ ದೇಶದ ಜೀವನಾಡಿ. ಭೂಮಿಯನ್ನ ತಾಯಿ ಎಂದು ಭಾವಿಸಿ ಉಳುಮೆ ಮಾಡುತ್ತಾನೆ. ಮಕ್ಕಳಿಗೆ ಉಗುರು ಕಟ್ಟು ಮಾಡಬೇಕು ಮತ್ತು ಮಕ್ಕಳು ಕೈ ಸ್ವಚ್ಚಗೊಳಿಸಬೇಕು ಆಗ ಆರೋಗ್ಯವಂತವಾಗಿ ಮಕ್ಕಳು ಬೆಳೆಯತ್ತಾರೆ.
ಮಹಾತ್ಮ ಗಾಂಧಿಜೀರವರು ಸ್ವಚ್ಚತಾ ಕುರಿತು ಅರಿವು ಮೂಡಿಸಿದರು. ಹಳ್ಳಿಗಳಲ್ಲಿ ಶೌಚಲಯಗಳು ನಿರ್ಮಾಣವಾಗಿರುವುದರಿಂದ ಹಳ್ಳಿ ಜನರ ಆರೋಗ್ಯ ಸುಧಾರಣೆಯಾಗಿದೆ. ನೊಣಗಳಿಂದ ಜಂತುಹುಳುಗಳು ಬರುತ್ತದೆ, ತೊಳೆದು ತಿನ್ನಬೇಕು ಅಥವಾ ಬಿಸಿ ಆಹಾರ ಸೇವನೆ ಮಾಡಬೇಕು. ಸ್ವಚ್ಚತೆ ಆರೋಗ್ಯ ಮತ್ತು ಆಹಾರದಲ್ಲಿ ಇರಬೇಕು ಎಂದು ಹೇಳಿದರು.
ವಿದ್ಯಾವಂತ ಸಮಾಜ ನಿರ್ಮಾಣ ಮಾಡಬೇಕು ಎಂದರೆ ಬಡ ಮಕ್ಕಳನ್ನು ದತ್ತು ಪಡೆದು ಅವರಿಗೆ ವಿದ್ಯಾದಾನ ಮಾಡಿ ಎಂದು ಹೇಳಿದರು. ಸಂಪಾದಕರಾದ ಅರವಿಂದ್ ಯೋಗರಾಜು ನಿವೃತ್ತ ಐಎಎಸ್ ಅಧಿಕಾರಿ ಪುಟ್ಟರಂಗಪ್ಪ, ಸಚಿವ ಶ್ರೀಧರ್ ರವರು ಮಾರ್ಗದರ್ಶನದಲ್ಲಿ ಪತ್ರಿಕೆ ಆರಂಭವಾಗಿ 10ವರ್ಷವಾಯಿತು.ಲಯನ್ ವೆಂಕಟೇಶ್ ಉಪಸಂಪಾದಕ ಶ್ರೀನಿವಾಸ್ ರವರ ಸಹಕಾರದಿಂದ ಪತ್ರಿಕೆ ತುಂಬಾ ಮೂಡಿ ಬರುತ್ತಿದೆ.
ಪತ್ರಿಕೆ ನಡೆಸುವುದು ಬಹಳ ಕಷ್ಟ ಅದರು ಉತ್ತಮ ಸುದ್ದಿಗಳನ್ನು ಹಾಕಿ ಸಮಾಜದ ಬದಲಾವಣೆ ತರುವಲ್ಲಿ ಸ್ವಚ್ಚ ಪರಿಸರ ಪತ್ರಿಕೆ ಯಶ್ವಸಿಯಾಗಿದೆ ನಿಮ್ಮ ಸಹಕಾರ, ಬೆಂಬಲ ಸದಾ ಹೀಗೆ ಇರಲಿ ಎಂದು ಹೇಳಿದರು.