ಬೆಂಗಳೂರು, ಜುಲೈ 15, (ಕರ್ನಾಟಕ ವಾರ್ತೆ): ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ 2025-26ನೇ ಸಾಲಿನ 53ನೇ ವಾರ್ಷಿಕ ಕಲಾ ಸ್ಪರ್ಧೆ / ಪ್ರದರ್ಶನ / ಬಹುಮಾನಕ್ಕಾಗಿ ನಿಯಮಗಳನುಸಾರ ಚಿತ್ರಕಲಾವಿದರಿಂದ ಅರ್ಜಿಯನ್ನು ಅಹ್ವಾನಿಸಲಾಗಿದೆ.
ಕರ್ನಾಟಕದ ನಿವಾಸಿಗಳಾಗಿರುವ ಅಥವಾ ಕಳೆದ 05 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಕಲಾವಿದರು ಈ ಕಲಾಪ್ರದರ್ಶನದಲ್ಲಿ ಭಾಗವಹಿಸಬಹುದಾಗಿದೆ. 53 ನೇ ವಾರ್ಷಿಕ ಕಲಾಪ್ರದರ್ಶನದ ಬಹುಮಾನಕ್ಕೆ ತೀರ್ಪುಗಾರರಿಂದ ಅಯ್ಕೆಯಾದ ಒಟ್ಟು 10 ಕಲಾಕೃತಿಗಳಿಗೆ ತಲಾ ರೂ.25,000/- ಗಳ ನಗದು ಹಾಗೂ ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
ಕಲಾ ಪ್ರದರ್ಶನದಲ್ಲಿ ಭಾಗವಹಿಸಲಿಚ್ಚಿಸುವ ಕಲಾವಿದರ ವಯಸ್ಸು ಕನಿಷ್ಠ 30 ವರ್ಷ ಮೇಲ್ಪಟ್ಟಿರಬೇಕು. ವೃತ್ತಿಪರ ಕಲಾವಿದರಾಗಿರಬೇಕು. ತಮ್ಮ ಕಲಾಕೃತಿಗಳ ಛಾಯಾಚಿತ್ರಗಳನ್ನು ನಿಗದಿತ ಅರ್ಜಿಯೊಂದಿಗೆ ಸಲ್ಲಿಸಬೇಕು. (2024 ರ ಹಿಂದೆ ರಚಿತವಾದ ಕಲಾಕೃತಿಗಳನ್ನು ಅಕಾಡೆಮಿಯು ಬಹುಮಾನಕ್ಕಾಗಿ ಪರಿಗಣಿಸುವುದಿಲ್ಲ) ಆಯ್ಕೆ ಸಮಿತಿಯು ಮೂಲ ಕೃತಿಗಳ ಛಾಯಾಚಿತ್ರ ಆಧರಿಸಿ ಆಯ್ಕೆ ಮಾಡಿದ ನಂತರ ಮೂಲ ಕೃತಿಗಳನ್ನು ಕಳುಹಿಸಬೇಕಾಗುತ್ತದೆ.
ಬಹುಮಾನ/ ಪ್ರದರ್ಶನಕ್ಕೆ ಕಳುಹಿಸುವ ಕಲಾಕೃತಿಗಳು ಗರಿಷ್ಠ 3x3 ಅಡಿ ಅಳತೆಯನ್ನು ಮೀರದಂತೆ ಕಳುಹಿಸಬೇಕು.
ಅನುಸೂಚಿಯನ್ನು ಸರಿಯಾಗಿ ಭರ್ತಿ ಮಾಡಿ ಮೂಲ ಕಲಾಕೃತಿಗಳ ಛಾಯಾಚಿತ್ರಗಳೊಂದಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಅರ್ಜಿಯನ್ನು 2025ನೇ ಆಗಸ್ಟ್ 16 ಒಳಗಾಗಿ ಕಳುಹಿಸಬೇಕು. (ಸರ್ಕಾರಿ ರಜಾ ದಿನಗಳನ್ನು ಹೊರತು ಪಡಿಸಿ) ಅವಧಿ ಮುಗಿದ ನಂತರ ಬರುವ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ತಡವಾದ ಅಂಚೆ, ಕೊರಿಯರ್‍ಗಳಿಗೆ ಅಕಾಡೆಮಿಯು ಜವಾಬ್ದಾರಿಯಾಗಿರುವುದಿಲ್ಲ.
ವ್ಯಕ್ತಿ ಪರಿಚಯ, ದೂರವಾಣಿ/ ಮೊಬೈಲ್ ಸಂಖ್ಯೆ/ಆಧಾರ್ ಸಂಖ್ಯೆ, ಇ-ಮೇಲ್ ಹಾಗೂ ಕಲಾವಿದರ ಭಾವಚಿತ್ರದೊಂದಿಗೆ, ಕಲಾಕೃತಿಯ "6x8" ಅಳತೆಯ ಛಾಯಾಚಿತ್ರಗಳನ್ನು ಮಾತ್ರ ಸ್ವೀಕರಿಸಲಾಗುವುದು.
ಕಲಾ ಪ್ರದರ್ಶನಕ್ಕೆ ವ್ಯಕ್ತಿ ಪರಿಚಯ ಮತ್ತು ಅವರ ಭಾವಚಿತ್ರದೊಂದಿಗೆ ಪ್ರವೇಶ ಶುಲ್ಕ ರೂ.300/-ಗಳ ನಗದು ಅಥವಾ ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಸಲ್ಲುವಂತೆ ಪಡೆದ ಡಿ.ಡಿ. ಮೂಲಕ ಅಕಾಡೆಮಿಗೆ ನೀಡಿ ರಸೀದಿ ಪಡೆಯಬೇಕು. (ಬಿ.ಪಿ.ಎಲ್ ಕಾರ್ಡ್ ಇದ್ದವರಿಗೆ ಪ್ರವೇಶ ಶುಲ್ಕದಿಂದ ವಿನಾಯತಿ ಇದೆ. ಕಡ್ಡಾಯವಾಗಿ ಅರ್ಜಿಯೊಂದಿಗೆ ಬಿ.ಪಿ.ಎಲ್ ಕಾರ್ಡ್‍ನ ಪ್ರತಿಯನ್ನು ಲಗತ್ತಿಸುವುದು)
ವಾರ್ಷಿಕ ಕಲಾಪ್ರದರ್ಶನ / ಬಹುಮಾನಕ್ಕೆ ಪ್ರವೇಶಪತ್ರ ಹಾಗೂ ಇತರೆ ದಾಖಲೆಗಳನ್ನು ಕಲಾವಿದರು ನೇರವಾಗಿ ಅಕಾಡೆಮಿಗೆ ತಲುಪಿಸಬೇಕು. ಆಯ್ಕೆಯಾದ ಕಲಾವಿದರು ಅರ್ಜಿ ನಮೂನೆಯಲ್ಲಿ ತಮ್ಮ ಕಲಾಕೃತಿಯ ಮಾಧ್ಯಮದ ವಿವರಗಳನ್ನು ಸ್ಪಷ್ಟವಾಗಿ ತಿಳಿಸುವುದು.
ಇನ್ನೂ ಹೆಚ್ಚಿನ ಮಾಹಿತಿಯನ್ನು 53 ನೇ ವಾರ್ಷಿಕ ಕಲಾಪ್ರದರ್ಶನ 2025 ರ ವಿವರಣ ಪತ್ರದಲ್ಲಿ ನಮೂದಿಸಲಾಗಿರುತ್ತದೆ. ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು- 560 002, ಇವರಿಗೆ ಖುದ್ದಾಗಿ ಅಥವಾ ರೂ. 10/-ಗಳ ಅಂಚೆ ಚೀಟಿ ಲಗತ್ತಿಸಿದ ಸ್ವ-ವಿಳಾಸವುಳ್ಳ ದೂರವಾಣಿಯ ಸಂಖ್ಯೆಯೊಂದಿಗೆ ಲಕೋಟೆಯನ್ನು ಕಳುಹಿಸಿ ಪಡೆಯಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ಕೊರಿಯರ್ ಮೂಲಕ 2025 ನೇ ಆಗಸ್ಟ್ 16ರ ಒಳಗಾಗಿ ಸಲ್ಲಿಸುವುದು. ಲಕೋಟೆಯ ಮೇಲೆ "53ನೇ ವಾರ್ಷಿಕ ಕಲಾಪ್ರದರ್ಶನಕ್ಕಾಗಿ ಅರ್ಜಿ" ಎನ್ನುವುದನ್ನು ಸ್ಪಷ್ಟವಾಗಿ ಬರೆದಿರಬೇಕು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಛಾಯಾಚಿತ್ರ ಶೀರ್ಷಿಕೆ :
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಯುವ ಕೌಶಲ್ಯ ದಿನಾಚರಣೆ ಹಾಗೂ ವಿಶ್ವ ಕೌಶಲ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ರಾಜ್ಯ, ಶುಶ್ರೂμÁ ಪರಿಷತ್ತು ವತಿಯಿಂದ ಆಧಾರ್ ಹಾಗೂ ಡಿಜಿಲಾಕರ್ ಇ-ಕೆವೈಸಿ ಮೂಲಕ ಶುಶ್ರೂμÁ ಸಮೂಹದವರಿಗೆ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಿಸುವ ತಂತ್ರಜ್ಞಾನದ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಿವಕಾಂತಮ್ಮ ನಾಯಕ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.