5 ದಿನಗಳ ಸಿಬಿಎ ಕಾರ್ಯಾಗಾರದ ಉದ್ಘಾಟನಾ ಸಮಾರಂಭ

varthajala
0

 ಬೆಂಗಳೂರು, ಜುಲೈ 15, (ಕರ್ನಾಟಕ ವಾರ್ತೆ): ಶ್ರೀ ಅರಬಿಂದೋ ಸೊಸೈಟಿ ಫಾರ್ ಸೈನ್ಸ್ ಕೋಆರ್ಡಿನೇಟರ್ಸ್ ರೂಪಂತರ್ ವತಿಯಿಂದ ಆಯೋಜಿಸಿದ್ದ ಟಿಜಿಟಿ ವಿಜ್ಞಾನಕ್ಕಾಗಿ 5 ದಿನಗಳ ಸಾಮಥ್ರ್ಯ-ಆಧಾರಿತ ಮೌಲ್ಯಮಾಪನ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಜುಲೈ 14, 2025 ರಂದು ಪಿಎಂ ಶ್ರೀ ಕೆವಿ ಎಂಇಜಿ & ಸೆಂಟರ್‍ನಲ್ಲಿ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಆರ್‍ಒದ ಕೆವಿಎಸ್‍ನ ಉಪ ಆಯುಕ್ತರಾದ ಧಮೇರ್ಂದ್ರ ಪಟ್ಲೆ ಅವರು ಮಾತನಾಡಿ, ಉತ್ತಮ ವಿಜ್ಞಾನ ಶಿಕ್ಷಕರ ಪಾತ್ರವನ್ನು ಒತ್ತಿಹೇಳುವ ಮತ್ತು ಸಾಮಥ್ರ್ಯ ಆಧಾರಿತ ಕಲಿಕೆ ಮತ್ತು ಮೌಲ್ಯಮಾಪನದ ಮೇಲೆ ಕೇಂದ್ರೀಕರಿಸಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಸಹಾಯಕ ವ್ಯವಸ್ಥಾಪಕಿ ಶ್ರೀಮತಿ ಉಮಿಯಾ ಅಫೆÇ್ರೀಜ್ ಮತ್ತು ಎಸ್‍ಎಎಸ್‍ನ ಪಠ್ಯಕ್ರಮ ಅಭಿವೃದ್ಧಿಯ ಹಿರಿಯ ಕಾರ್ಯನಿರ್ವಾಹಕ ದೀಪಕ್, ಶಾಲಾ ಮೌಲ್ಯಮಾಪನದ ಕುರಿತು ಆಕರ್ಷಕ ಅವಧಿಗಳನ್ನು ಮುನ್ನಡೆಸಿದರು.
ಈ ಕಾರ್ಯಾಗಾರವು ಸಾಮಥ್ರ್ಯ ಆಧಾರಿತ ಮೌಲ್ಯಮಾಪನವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ವಿಜ್ಞಾನ ಸಂಯೋಜಕರನ್ನು ಕೌಶಲ್ಯ ಮತ್ತು ಜ್ಞಾನದಿಂದ ಸಜ್ಜುಗೊಳಿಸುವ ಗುರಿಯನ್ನು ಹೊಂದಿತ್ತು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಎಲ್ಲರು  ಸಕ್ರಿಯ ಚಟುವಟಿಕೆಯ ಆಧಾರಿತವಾಗಿದ್ದರಲ್ಲದೇ,  ಕಲಿಕೆಯನ್ನು ಸುಗಮಗೊಳಿಸಲು ಭಾಗವಹಿಸುವವರಲ್ಲಿ ಗುಂಪುಗಳನ್ನು ರಚಿಸಲಾಯಿತು. ಈ ಕಾರ್ಯಾಗಾರವು ಬೋಧನೆ-ಕಲಿಕಾ ಪ್ರಕ್ರಿಯೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದ್ದು, ಶಿಕ್ಷಣತಜ್ಞರು ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ಣಯಿಸಲು ಮತ್ತು ಸಾಮಥ್ರ್ಯ ಆಧಾರಿತ ಶಿಕ್ಷಣವನ್ನು ಉತ್ತೇಜಿಸಲು ಅನುವು ಮಾಡಿಕೊಡಲಿದೆ.
ಈ ಉದ್ಘಾಟನಾ ಕಾರ್ಯಕ್ರಮವು 5 ದಿನಗಳ ಕಾರ್ಯಾಗಾರಕ್ಕೆ ಯಶಸ್ವಿ ಆರಂಭವನ್ನು ನೀಡುವುದರೊಂದಿಗೆ ಸಾಮಥ್ರ್ಯ ಆಧಾರಿತ ಮೌಲ್ಯಮಾಪನ ಮತ್ತು ಆಯಾ ಶಾಲೆಗಳಲ್ಲಿ ಅದರ ಅನುಷ್ಟನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವಕಾಶ ಒದಗಿಸಲಿದೆ.
ಪ್ರಾಂಶುಪಾಲ ಸರ್, ಲೋಕೇಶ್ ಬಿಹಾರಿ ಶರ್ಮಾ ಅವರು ಮುಖ್ಯ ಅತಿಥಿ ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಸಸಿಗಳನ್ನು ನೀಡಿ ಸ್ವಾಗತಿಸುತ್ತಾ ಸ್ವಾಗತ ಭಾಷಣ ಮಾಡಿದರು.
ಸಾಮಥ್ರ್ಯ-ಆಧಾರಿತ ಮೌಲ್ಯಮಾಪನದಲ್ಲಿ ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಈ ಕಾರ್ಯಾಗಾರದಲ್ಲಿ ಬೆಂಗಳೂರು ಪ್ರದೇಶದ ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.

Post a Comment

0Comments

Post a Comment (0)