ಹಿರಿಯ ಪತ್ರಕರ್ತ ಶಾಂತಕುಮಾರ್ ನಿಧನ: ಕೆಯುಡಬ್ಲ್ಯೂಜೆ ಸಂತಾಪ

varthajala
0

ಅರಸೀಕೆರೆ ಕನ್ನಡಪ್ರಭ ಪತ್ರಿಕೆಯ ವರದಿಗಾರ ಪಿ.ಶಾಂತಕುಮಾರ್ (56) ಅವರು ಹಾಸನದ‌ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಪತ್ನಿ, ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ.

ಹಿರಿಯ ಪತ್ರಕರ್ತ ಶಾಂತಕುಮಾರ್‌ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಶಾಂತಕುಮಾರ್ ಅವರ ವರದಿಗಾರಿಕೆಗಾಗಿ ಕೆಯುಡಬ್ಲ್ಯೂಜೆ ಪ್ರಶಸ್ತಿಯನ್ನು ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿನೀಡಿ‌ ಗೌರವಿಸಲಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಶಾಂತಕುಮಾರ್‌ ಅವರು ಪತ್ರಕರ್ತರಾಗಿ ಸಲ್ಲಿಸಿದ ಸೇವೆ ಅನನ್ಯ. ಗ್ರಾಮೀಣ ಭಾಗದ ವರದಿ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಬಗ್ಗೆ ಅವರ ಕಾಳಜಿ ಪ್ರಶಂಸನೀಯವಾಗಿತ್ತು ಎಂದು ತಗಡೂರು ಸ್ಮರಿಸಿದ್ದಾರೆ.

Post a Comment

0Comments

Post a Comment (0)