ಬೆಂಗಳೂರು, ಜುಲೈ 08 (ಕರ್ನಾಟಕ ವಾರ್ತೆ) : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯನ್ನು ಸಂಶೋಧನೆ ಮತ್ತು ನಾವೀನ್ಯತೆ ಪ್ರತಿಷ್ಠಾನ ಹಾಗೂ ಪರೀಕ್ಷಾ ಪರಿಣಿತಿ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಈ ಪ್ರಾದೇಶಿಕ ಕೇಂದ್ರವನ್ನು ಜುಲೈ 10 ರಂದು ಬೆಳಿಗ್ಗೆ 9.30 ಗಂಟೆಗೆ ಬೆಂಗಳೂರಿನ ನಾಗರಭಾವಿಯಲ್ಲಿ ಉದ್ಘಾಟಿಸಲಾಗುತ್ತಿದ್ದು, ಕೇಂದ್ರ ಸಂವಹನ ಹಾಗೂ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರಾದ ಜ್ಯೋತಿರಾದಿತ್ಯ ಎಂ ಸಿಂಧ್ಯಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಜೀವನೋಪಾಯ ಇಲಾಖೆಯ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ್, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(ಎಐಸಿಟಿಇ) ಅಧ್ಯಕ್ಷರಾದ ಪೆÇ್ರ.ಟಿ.ಜಿ.ಸೀತಾರಾಮ್ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಉಪ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಉಪಸ್ಥಿರಿರಲಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಂಗಳೂರಿನಲ್ಲಿರುವ ತನ್ನ ಪ್ರಾದೇಶಿಕ ಕಚೇರಿಯನ್ನು ವಿಟಿಯು ವಿಆರ್‍ಐಎಫ್ ಟಿಸಿ.ಇ ಹಬ್ ಅಂಡ್ ಸ್ಪೋಕ್ ಆಫ್ ಎಕ್ಸಲೆನ್ಸ್ ಆಗಿ ಪರಿವರ್ತಿಸಲಾಗಿದೆ. ಈ ಕಚೇರಿಯನ್ನು 1 ಲಕ್ಷ ಚದರ ಅಡಿಯಲ್ಲಿರುವ ವಿಶಾಲವಾದ ಕೇಂದ್ರದಲ್ಲಿ ಸಂಶೋಧನೆ ಮತ್ತು ನವೋದ್ಯಮ, ಭವಿಷ್ಯದ ಪೀಳಿಗೆ ತಂತ್ರಜ್ಞಾನಕ್ಕೆ ಸಾಮಥ್ರ್ಯ ನಿರ್ಮಾಣ ಮಾಡಲಿದೆ.
ಈ ಸೆಂಟರ್ ಆಫ್ ಎಕ್ಸಾಲೆನ್ಸ್ (ಸಿಒಇ) ವಿಟಿಯು, ವಿಶ್ವೇಶ್ವರಯ್ಯ ಸಂಶೋಧನೆ ಮತ್ತು ನಾವೀನ್ಯತೆಯ ಫೌಂಡೇಶನ್ (ವಿಆರ್‍ಐಎಫ್), ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ (ಟಿಸಿ.ಇ) ಇಂಡಿಯಾ ನಡುವೆ ಒಂದು ಕಾರ್ಯತಂತ್ರದ ಪಾಲುದಾರಿಕೆಯಾಗಿ ಕೆಲಸ ಮಾಡಲಿದೆ.
ಈ ಸಹಭಾಗಿತ್ವ ಮಾಡಿಕೊಂಡಿರುವ ಪ್ರಮುಖ ಉದ್ದೇಶ, ಅತ್ಯಾಧುನಿಕ ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದಾಗಿದೆ. ಆ ಮೂಲಕ ಉದಯೋನ್ಮುಖ ಕ್ಷೇತ್ರಗಳಾದ 5ಜಿ, ಕೆಜಿ ಕಮ್ಯೂನಿಕೇಷನ್, ಕೃತಕ ಬುದ್ದಿಮತ್ತೆ (ಎಐ), ಮಷಿನ್ ಲನಿರ್ಂಗ್ (ಎಂಎಲ್), ಆಗ್ಮೆಟೆಂಡ್ ಅಂಡ್ ವರ್ಚುವಲ್ ರಿಯಾಲಿಟಿ (ಎಆರ್.ವಿಆರ್), ಕ್ವಾಟಂ ಕಂಪ್ಯೂಟಿಂಗ್, ಹೆಲ್ತ್ ಕೇರ್ ಮತ್ತು ಇತರೆ ಪ್ರಮುಖ ತಂತ್ರಜ್ಞಾನದ ಕುರಿತು ಸಂಶೋಧನೆ ನಡೆಯಲಿದೆ.
ರಾಷ್ಟ್ರೀಯ ನಾವೀನ್ಯತೆ ಕೇಂದ್ರವಾಗಿ ಕಾರ್ಯನಿರ್ವಹಿಸುವ ಈ ಕೇಂದ್ರವು ವಿಟಿಯುನ ವಿಸ್ತಾರವಾದ ಶೈಕ್ಷಣಿಕ ಜಾಲವನ್ನು ಬಳಕೆ ಮಾಡಿಕೊಳ್ಳಲಿದೆ. ವಿಟಿಯು ವ್ಯಾಪ್ತಿಯಲ್ಲಿರುವ 210ಕ್ಕೂ ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳಿದ್ದು, 20 ಸಾವಿರಕ್ಕೂ ಹೆಚ್ಚು ಪಿಎಚ್.ಡಿ ಪದವೀಧರರು, 4 ಲಕ್ಷಕ್ಕೂ ಹೆಚ್ಚಿನ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಈ ಸಂಶೋಧನಾ ಮತ್ತು ನಾವೀನ್ಯತೆ ಕೇಂದ್ರದ ಸದ್ಬಳಕೆ ಮಾಡಿಕೊಳ್ಳಲಿದ್ದಾರೆ. ಟಿಸಿಎಇ ತಂತ್ರಜ್ಞಾನ ಚಾಲಿತ ಉದ್ಯಮಶೀಲತೆ ಮತ್ತು ದೊಡ್ಡ ಪ್ರಮಾಣದ ಕೌಶಲ್ಯ ಅಭಿವೃದ್ಧಿಯನ್ನು ಸುಗಮಗೊಳಿಸಲು ದೃಢವಾದ ಇಂಟರ್‍ಫೇಸ್ ಆಗಿ ಜೊತೆಯಾಗಲಿದೆ.
ಇದೇ ವೇಳೆ ಸ್ಟಾರ್ಟ್ ಅಪ್ ಸಂವಾದ, ಕಾರ್ಯತಂತ್ರದ ಕೈಗಾರಿಕಾ ಪಾಲುದಾರಿಕೆ ಕುರಿತು ಪರಸ್ಪರ ಒಪ್ಪಂದಗಳಾಗಲಿವೆ. ಕೌಶಲ್ಯ ಅಭಿವೃದ್ಧಿ ಕ್ಷೇತ್ರದ ದಿಗ್ಗಜರಾದ ಟೆಲಿವರ್ಜ್, ತೇಜಸ್ ನೆಟ್‍ವಕ್ರ್ಸ್, ವಿವಿಡಿಎನ್ ಟೆಕ್ನಾಲಜಿಸ್, ಟಿಎಸ್‍ಎಸ್ಸಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. 20ಕ್ಕೂ ಹೆಚ್ಚಿನ ಸ್ಟಾರ್ಟ್ ಅಪ್ಸ್, 30ಕ್ಕೂ ಹೆಚ್ಚಿನ ಶೈಕ್ಷಣಿಕ ಸಂಸ್ಥೆಗಳು, ಟೆಕ್ನಾಲಜಿ ಪಾಟ್ನರ್ಸ್ ಈ ವಿಟಿಯು ಸಂಶೋಧನಾ ಮತ್ತು ನಾವೀನ್ಯತೆಯ ಕೇಂದ್ರವು ಭಾರತದ ಡಿಜಿಟಲ್ ರೂಪಾಂತರ ಮತ್ತು ನಾವೀನ್ಯತೆ ಆರ್ಥಿಕತೆಗೆ ವೇಗ ನೀಡಲಿದೆ.
ಈ ಕಚೇರಿಯಲ್ಲಿ ನಾವೀನ್ಯತೆ ಕೇಂದ್ರದ ಹೈಲೈಟ್ಸ್, ಪ್ರಯೋಗಾಲಯದ ವ್ಯವಸ್ಥೆ, ವೀಡಿಯೋ ಕಾನ್ಫರೆನ್ಸ್‍ಗೆ ಪ್ರತ್ಯೇಕ ಕೊಠಡಿ, ಗೃಹಿಣಿಯರ ಅನುಕೂಲಕ್ಕಾಗಿ ಡೇ ಕೇರ್, ಅತ್ಯಾಧುನಿಕ ಕೆಫಿಟೇರಿಯಾ, ವಿಟಿಯು ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಅವಕಾಶ ಹಾಗೂ ಇಂಟರ್ನ್‍ಶಿಪ್‍ಗೂ ಅನುಕೂಲ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.