ಸಿಬ್ಬಂದಿ ಆಯ್ಕೆ ಆಯೋಗದಿಂದ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ

varthajala
0

ಸಿಬ್ಬಂದಿ ಆಯ್ಕೆ ಆಯೋಗ ಕರ್ನಾಟಕ ಮತ್ತು ಕೇರಳ ವಿಭಾಗದ ವತಿಯಿಂದ ಉದ್ಯೋಗಾಂಕ್ಷಿಗಳಿಗೆ ಕಿರಿಯ ದರ್ಜೆಯ ಕ್ಲರ್ಕ್/ಕಿರಿಯ ಸಚಿವಾಲಯ ಸಹಾಯಕರು/ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಕೇಂದ್ರ ಸರ್ಕಾರದ ವಿವಿಧ ಮಂತ್ರಾಲಯಗಳ ಸುಮಾರು 3,131 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲು ಸಂಯೋಜಿತ ಹೈಯರ್ ಸೆಕೆಂಡರಿ ಹಂತದ ಪರೀಕ್ಷೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಗಳು 18 ರಿಂದ 27 ವರ್ಷದೊಳಗಿದ್ದು, ಯಾವುದೇ ಅಂಗೀಕೃತ ಸಂಸ್ಥೆಯಿಂದ ಪಿಯುಸಿ ಪಾಸಾಗಿರಬೇಕು. ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಲು ಜುಲೈ 18 ಕೊನೆಯ ದಿನವಾಗಿರುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ಸೆಪ್ಟಂಬರ್ 8 ರಿಂದ 18 ರವರೆಗೆ ನಡೆಸಲು ಉದ್ದೇಶಿಸಲಾಗಿದೆ.
ಹೆಚ್ಚಿನ ವಿವರಗಳನ್ನು https://ssc.gov.in ಹಾಗೂ  https://ssckkr.kar.nic.in ರಲ್ಲಿ ಪಡೆಯಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

VK NEWS DIGITAL



Post a Comment

0Comments

Post a Comment (0)