ಗುಣಮಟ್ಟವಲ್ಲದ ಔಷಧಿ ಮತ್ತು ಕಾಂತಿವರ್ಧಕಗಳ ಬಳಕೆ ನಿಷೇಧ

varthajala
0

ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ವಿವಿಧ ಔಷಧಿ ಮತ್ತು ಕಾಂತಿವರ್ಧಕಗಳನ್ನು ಗುಣಮಟ್ಟ ಹೊಂದಿಲ್ಲವೆಂದು ಘೋಷಿಸಿದ್ದಾರೆ.

ಗೋವಾದ ಮೆ. ಪುನಿಷ್ಕ ಇನ್‍ಜೆಕ್ಟಬಲ್ ಪ್ರೈ.ಲಿಮಿಟೆಡ್‍ನ ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲೂ/ವಿ (ಎನ್‍ಎಸ್), ಬ್ಯಾಚ್ ಸಂಖ್ಯೆ ಟಿಐ204ಎ002, ಟಿಐ404ಬಿ024, ಯುಬಿ404ಬಿ021,  ಅಹಮದಬಾದ್‍ನ  ಮೆ. ಕೇರ್‍ವಿನ್ ಫಾರ್ಮಾಸ್ಯೂಟಿಕಲ್ಸ್ (ಗುಜರಾತ್) ಪ್ರೈ. ಲಿಮಿಟೆಡ್‍ನ   ಫೆನಿರಮೈನ್ ಮಲೇಟ್ ಇನ್‍ಜೆಕ್ಷನ್ ಐಪಿ (ಕೇರ್ ವಿಲ್), ಜಮ್ಮುವಿನ ಮೆ. ವಿವೇಕ್ ಫಾರ್ಮಾಕೇಮ್ (ಇಂಡಿಯಾ) ಲಿಮಿಟೆಡ್‍ನ ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್ ಐಪಿ 500 ಎಂಜಿ, ಡಿಸ್ಟ್ ಸೊಲನ್‍ನ (ಹೆಚ್.ಪಿ.) ಇಂಡಿಯಾದ ಮೆ. ಬಯೋಡೀಲ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್‍ನ ಮುಪಿರೋಸಿನ್ ಆಯಿಂಟ್‍ಮೆಂಟ್ ಐಪಿ (ಮುಪಿಫೀಟ್), ಸಿಲ್ವಾಸ್ಸ್‍ನ ಮೆ. ಪೆಂಟಾ ಫಾರ್ಮಾಸ್ಯೂಟಿಕಲ್ಸ್‍ನ ಡೆಕ್ಸಾಮೆಥಾಜೋನ್ ಟ್ಯಾಬ್ಲೆಟ್ಸ್ ಐ.ಪಿ. 0.5 ಎಂಜಿ, ಹರಿದ್ವಾರದ ಮೆ. ಎಬಿಓಡಿ ಫಾರ್ಮಾಸ್ಯೂಟಿಕಲ್ಸ್‍ನ ಪ್ಯಾಂಟಾಸ್-ಡಿ (ಪ್ಯಾಂಟೋಫ್ರಜೋಲ್ & ಡೋಮ್‍ಫೆರಿಡನ್ ಟ್ಯಾಬ್ಲೆಟ್ಸ್), ಜಯ್‍ಪುರದ ಮೆ. ವಿವೇಕ್ ಫಾರ್ಮಾಕೇಮ್ (ಇಂಡಿಯಾ) ಲಿಮಿಟೆಡ್‍ನ ಸಿಪ್ರೋಪ್ಲಾಕ್ಸಸಿನ್ ಹೈಡ್ರೋಕ್ಲೋರೈಡ್  ಟ್ಯಾಬ್ಲೆಟ್ಸ್ ಐಪಿ 250 ಎಂಜಿ, ಗೋವಾದ ಮೆ. ಪುನಿಷ್ಕ ಇನ್‍ಜೆಕ್ಟಬಲ್ ಪ್ರೈ.ಲಿಮಿಟೆಡ್‍ನ ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲೂ/ವಿ (ಎನ್‍ಎಸ್)ಬ್ಯಾಚ್ ಸಂಖ್ಯೆ ಟಿಲ್ 504ಇ006, ತಾನದ ಮೆ. ನೆಪ್ಚೂನ್ ಲೈಫ್ ಸೈನ್ಸ್‍ಸ್ ಪ್ರೈ ಲಿಮಿಟೆಡ್‍ನ  ಬೈಗೋ ಸಲೂಷನ್ (ಪೋವಿಡನ್ ಅಯೋಡಿನ್ ಸಲೂಷನ್ ಐ.ಪಿ), ಸೋಲನ್‍ನ ಮೆ. ವೆರಾಕ್ಸ್ ಲೈಫ್ ಸೈನ್ಸ್‍ಸ್ ಪ್ರೈ. ಲಿಮಿಟೆಡ್‍ನ ಎಪ್ರೋಜ್-50 (ಎಪರಿಸೋನ್ ಹೆಚ್‍ಸಿಎಲ್ ಟ್ಯಾಬ್ಲೆಟ್ಸ್), ಅಹಮದಬಾದ್‍ನ ಮೆ. ಎಡ್ಕೆಮ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್‍ನ ಅಸಿವೇವ್ (ಎನೆಸ್ಥಿಟಿಕ್, ಅಚಿಟಿಸಿಡ್ & ಅಚಿಟಿಪ್ಲಟುಲೆಮಟ್ ಓರಲ್ ಸಸ್‍ಫೆನ್‍ಶನ್), ಗೋವಾದ ಮೆ. ಪುನಿಷ್ಕ ಇನ್‍ಜೆಕ್ಟಬಲ್ ಪ್ರೈ.ಲಿಮಿಟೆಡ್‍ನ ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲೂ/ವಿ (ಎನ್‍ಎಸ್) ಬ್ಯಾಚ್ ನಂ.ಯುಎ404ಬಿ021,  ಸೋಲನ್‍ನ ಮೆ. ಹನುಚೆಮ್ ಲ್ಯಾಬೋರೇಟರಿಸ್‍ನ ಕ್ಯಾಲ್ಸಿಯಂ ಅಂಡ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ (ಜೆನಿಬೋನ್ 500), ಫಲ್ಘರ್‍ನ  ಮೆ. ಬಿಟ್ಟು ಫಾರ್ಮಾಸ್ಯೂಟಿಕಲ್ಸ್ (II)ನ ಡಿಫೈನ್‍ಹೈಡ್ರೋಮಿನ್ ಹೈಡ್ರೊಕ್ಲೋರೈಡ್ ಕ್ಯಾಪ್ಲೂಲ್ಸ್ ಐಪಿ 25 ಎಂಜಿ, ಹಿಮಾಚಲ್‍ಪ್ರದೇಶ್‍ನ ಮೆ.ಜಡ್‍ಅರ್‍ಎಸ್ ಫಾರ್ಮಾಸ್ಯೂಟಿಕಲ್ಸ್‍ನ ಕಾಕ್ಸ್ಮಿತ್-60 ಟ್ಯಾಬ್ಲೆಟ್ಸ್ (ಎಟೋರಿಕಾಕ್ಸಿಬ್ ಟ್ಯಾಬ್ಲೆಟ್ಸ್ ಐ.ಪಿ 60 ಎಂಜಿ),  ಕುರಾಲಿಯ ಮೆ. ಡಾ. ಎಡ್ವಿನ್ ಮೆಡಿಲ್ಯಾಬ್ಸ್ ಪ್ರೈ. ಲಿಮಿಟೆಡ್‍ನ ಕಾಕ್ಸ್ಮಿತ್-90 ಟ್ಯಾಬ್ಲೆಟ್ಸ್ (ಎಟೋರಿಕಾಕ್ಸಿಬ್ ಟ್ಯಾಬ್ಲೆಟ್ಸ್ ಐ.ಪಿ 90 ಎಂಜಿ)ಈ ಔಷಧಿ ಮತ್ತು ಕಾಂತಿವರ್ಧಕಗಳನ್ನು ಗುಣಮಟ್ಟ ಹೊಂದಿಲ್ಲವೆಂದು ತಿಳಿಸಿದ್ದಾರೆ.

ಈ ಔಷಧಿಗಳನ್ನು / ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನಸಿರ್ಂಗ್ ಹೋಮ್‍ನವರು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವುದು. ಸಾರ್ವಜನಿಕರು ಈ ಔಷಧಗಳನ್ನು / ಕಾಂತಿವರ್ಧಕಗಳನ್ನು ಉಪಯೋಗಿಸಬಾರದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಉಪ ಔಷಧ ನಿಯಂತ್ರಕರು & ನಿಯಂತ್ರಣಾಧಿಕಾರಿ ಬಿ.ಪಿ.ಅರುಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
VK DIGITAL NEWS
INDIA EMERGENCY 1975




Post a Comment

0Comments

Post a Comment (0)