ಇಂಟರ್ನ್ಯಾಷನಲ್ ವೈಶ್ ಫೆಡರೇಷನ್ ತನ್ನ ವಾರ್ಷಿಕೋತ್ಸವದ ನಿಮಿತ್ತ ಇಂದು ಪದ್ಮನಾಭನಗರದ ಮಹಾರಾಜಾ ಅಗ್ರಸೇನಾ ಆಸ್ಪತ್ರೆಯಲ್ಲಿ ಟೂರ್ ಇಂಫೀನಿಟಿ ಪ್ರವಾಸ ಸಂಸ್ಥ ಮತ್ತು ಬಿ ಎಸ್ ಕೆ ಜೀವಾಶ್ರಯ ರಕ್ತ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನ ಶನಿವಾರ ಆಯೋಜಿಸಿತ್ತು,
ಒಟ್ಟು ನೂರು ಯೂನಿಟ್ ರಕ್ತವನ್ನು ದಾನಿಗಳಿಂದ ಪಡೆಯಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಟೂರ್ ಇಂಫೀನಿಟಿ ಪ್ರವಾಸ ಸಂಸ್ಥಯ ಮುಖ್ಯಸ್ತ ಸಾಯಿರಾಜ್ " ಪ್ರವಾಸಿ ಸಂಸ್ಥೆಯ ಮುಖ್ಯಸ್ಥ ಸಾಯಿ ಪ್ರಕಾಶ್ ಇವರು ರಕ್ತದಾನ ಶ್ರೇಷ್ಠ ದಾನ ರಕ್ತ ದಾನ ಮಾಡುವ ಮುಖಾಂತರ ರೋಗಿಗಳ ಜೇವ ಉಳಿಸಲು ಕಾರಣರಾಗಿ ತಮ್ಮ ಆರೋಗ್ಯ ವನ್ನು ಜಾಸ್ಪಡಿಕೊಳ್ಳಿ" ಎಂದು ಹೇಳಿದರು, ಇಂಟರ್ನ್ಯಾಷನಲ್ ವೈಶ್ ಫೆಡರೇಷನ್ ರಾಜ್ಯ ಅಧ್ಯಕ್ಷ ಆರ್ ಪಿ ರವಿಶಂಕರ್ ಇವರು ಉಪಸ್ಥಿತರಿದ್ದು ದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಪ್ರವಾಸಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ರಕ್ತ ದಾನ ಮಾಡಿದರು.
ಇಂಟರ್ನ್ಯಾಷನಲ್ ವೈಶ್ ಫೆಡರೇಷನ್ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.