ಬೆAಗಳೂರಿನ ಚಾಮರಾಜಪೇಟೆಯ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಮಹಾಸ್ವಾಮಿಗಳ ಚಾತುರ್ಮಾಸ್ಯ ಬೆಂಗಳೂರಿನ ಶ್ರೀಮಠದಲ್ಲಿಯೇ ಇಂದಿನಿAದ ಆರಂಭಗೊAಡಿದೆ.
ಇಂದು ಬೆಳಿಗ್ಗೆ ಶ್ರೀಕೃಷ್ಣಪಂಚಕಾದಿ ವ್ಯಾಸ ಪೂಜೆ ಸೇರಿದಂತೆ ಹತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ಶ್ರೀಗಳು ಚಾತುರ್ಮಾಸ್ಯ ವ್ರತ ಆರಂಭಿಸಿದರು. ಜಗದ್ಗುರು ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಮಹಾಸ್ವಾಮಿಗಳ 5ನೇ ಚಾತುರ್ಮಾಸ್ಯ ಇದಾಗಿದೆ. ಅಲ್ಲದೆ ಮಹಾಸ್ವಾಮಿಗಳವರ ಸನ್ಯಾಸ ಹಾಗೂ ಪೀಠಾರೋಹಣದ ಚತುರ್ಥ ವಾಷಿಕೋತ್ಸವ ಸಮಾರಂಭವು ಸಹ ಇದೇ ಸಂದರ್ಭದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಭಕ್ತ ಮಹಾಜನರು ಶ್ರೀಗಳಿಗೆ ಭಿಕ್ಷಾವಂದನೆ ಹಾಗೂ ಪಾದಪೂಜಾದಿ ಸೇವೆಗಳನ್ನು ಸಮರ್ಪಿಸಿ ಶ್ರೀಗಳಿಂದ ಆರ್ಶಿವಾದ ಪಡೆದರು.
ಈ ಸಂದರ್ಭದಲ್ಲಿ ಆರ್ಶೀವಚನ ನೀಡಿದ ಶ್ರೀಗಳು ಗುರುಪೂರ್ಣಿಮೆಯು ನಮ್ಮ ಸನಾತನ ಧರ್ಮ, ಸಂಸ್ಕೃತಿಯಲ್ಲಿ ಮಾನವ ಸಮಾಜವನ್ನು ಸನ್ಮಾರ್ಗದತ್ತ ನಡೆಸಲು ಪಥದರ್ಶಕರಾದ ಗುರುವನ್ನು ಭಕ್ತಿಯಿಂದ ಪೂಜಿಸುವ ದಿನವಾಗಿದೆ. ಇದು ಭಾರತೀಯ ಅಧ್ಯಾತ್ಮಿಕ ಜಗತ್ತಿನ ಮಹತ್ವಪೂರ್ಣ ಆಚರಣೆಯಾಗಿದ್ದು, ಪ್ರತಿಯೊಬ್ಬ ವ್ಯಕ್ತಿಗೆ ತನ್ನೊಳಗಿನ ಆತ್ಮ ಶಕ್ತಿಯನ್ನು ಅರಿಯಲು ಒಬ್ಬ ಸದ್ಗುರು ಬೇಕು. ಈ ಕಾರಣದಿಂದಲೇ ಪ್ರತಿ ಆಶಾಡ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವನ್ನು ಪ್ರತಿ ವರ್ಷವೂ ಗುರುಪೂರ್ಣಿಮೆ ದಿನವನ್ನಾಗಿ ಆಚರಿಸಲಾಗುತ್ತಿದೆ. ಗುರು ಎಂಬುದು ಇಡೀ ಬ್ರಹ್ಮಾಂಡವನ್ನು ಮುನ್ನೆಡೆಸುವ ಮಹಾಶಕ್ತಿಯಾಗಿದ್ದು ಆತ್ಮಜ್ಞಾನದಲ್ಲಿ ಪರಮಾತ್ಮನನ್ನು ಕಾಣುಬಲ್ಲ ತನ್ಮೂಲಕ ಪಾರಮಾರ್ಥಿಕ ಸೇವೆ ಮಾಡಬಲ್ಲ ಗುರುಗಳ ಅರ್ಶೀವಾದ ಹಾಗೂ ಆಶ್ರಯ ಇಂದಿನ ಯುವ ಪೀಳಿಗೆಗ ಅಗತ್ಯವಾಗಿದೆ ಎಂದರು. ನಮ್ಮೊಳಗಿರುವ ಅಹಂಕಾರವನ್ನು ತೊರೆದು ಶುದ್ಧ ಮನಸ್ಸಿನಿಂದ ಗುರುಗಳ ಪೂಜೆ ಮಾಡುವುದರಿಂದ ಪ್ರತಿಯೊಬ್ಬರಿಗೂ ಮನಃಶಾಂತಿ ದೊರೆಯುತ್ತದೆ. ಗುರು ಪೂರ್ಣಿಮೆಯ ದಿನ ಪ್ರತಿಯೊಬ್ಬರಿಗೂ ಆತ್ಮವಾಲೋಕನ ಮಾಡಿಕೊಳ್ಳುವ ಪ್ರೇರಣೆ ನೀಡುವ ಪವಿತ್ರ ದಿನವಾಗಿದೆ. ಪ್ರತಿಯೊಬ್ಬರ ಬದುಕು ಅಂಧಕಾರದಿAದ ಬೆಳಕಿನಡೆಗೆ ಸಾಗಲು ಗುರುಗಳ ಕೃಪಾರ್ಶೀವಾದ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಗ್ಯ ಗುರುಗಳ ಅನುಸಂಧಾನದಿAದ ತಮ್ಮ ಜನ್ಮ ಸಾರ್ಥಕ್ಯ ಮಾಡಿಕೊಳ್ಳುವತ್ತ ಮಂದಡಿ ಇಡಬೇಕು ಎಂದು ಉಪದೇಶಿಸಿದರು.
ವ್ರತಾರಂಭ ಸಮಾರಂಭದಲ್ಲಿ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಮಹೇಶ ವಾಳ್ವೇಕರ್, ಕಾರ್ಯದರ್ಶಿ ಅಶ್ವಥ್‌ನಾರಾಯಣ್, ಆಡಳಿತ ಮಂಡಳಿ ಸದಸ್ಯರಾದ ಪ್ರಕಾಶ ನಾಡಿಗೇರ್, ನಿನಾದ್ ಕಾಶಿಕರ್, ಸಂಸ್ಕೃತ ವಿದ್ವಾಂಸರಾದ ವೇತಮೂರ್ತಿ ನಾರಾಯಣ ಜೋಶಿ, ವಿಶ್ವನಾಥ ಶಾಸ್ತಿç ಜೋಷಿ, ಹನುಮಂತ್ ಭಟ್, ಕೇದಾರ್ ಬಂಕನಾಳ, ಸುದರ್ಶನ್, ಪಾಂಡುರAಗ ಕುಲಕರ್ಣಿ, ಶಿವರಾಮ ಭಟ್, ಶ್ರೀಪಾದ ಡಂಬಳ, ರವಿಜೋಶಿ, ಗುರುದತ್ತ ದೇಶಪಾಂಡೆ, ಬೆಸ್ಕಾಂ ಹಿರಿಯ ಅಧಿಕಾರಿ ವೆಂಕಟೇಶ ಬಿ. ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ಉಪಸ್ಥಿತರಿದ್ದರು.
ಭಾದ್ರಪದ ಮಾಸದ ಶುಕ್ಲ ಪಕ್ಷದ ಸೆಪ್ಟಂಬರ್ 07 ರ ಅನಂತನ ಹುಣ್ಣಿಮೆ ದಿನದಂದು ಜಗದ್ಗುರುಗಳು ಸೀಮೊಲ್ಲಂಘನ ಮಾಡುವ ಮೂಲಕ ಚಾತುರ್ಮಾಸ್ಯ ವ್ರತ ಮುಕ್ತಾಯಗೊಳಿಸಲಿದ್ದಾರೆ. ಚಾತುರ್ಮಾಸ್ಯದ ವ್ರತಾಚರಣೆ ಸಂದರ್ಭದಲ್ಲಿ ಜಗದ್ಗುರುಗಳು ವಿವಿಧ ಧಾರ್ಮಿಕ ಹೋಮ-ಹವನ, ಅನುಷ್ಠಾನ, ಪ್ರವಚನಾದಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಎರಡು ತಿಂಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಮಹಾಸ್ವಾಮೀಜಿ ಚಾಮರಾಜ ಪೇಟೆಯ 5ನೇ ಮುಖ್ಯರಸ್ತೆಯ ದೇವನಾಥಾಚಾರಿ ಬೀದಿಯಲ್ಲಿರುವ ಶ್ರೀಮಠದಲ್ಲಿಯೇ ವಾಸ್ತವ್ಯವಿದ್ದು ಭಕ್ತರಿಗೆ ದರ್ಶನ ನೀಡಲಿದ್ದಾರೆ ಎಂದು ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಮಹೇಶ ವಾಳ್ವೇಕರ್ ತಿಳಿಸಿದ್ದಾರೆ.
ಡಾ. ಮಹೇಶ ವಾಳ್ವೇಕರ್
ಅಧ್ಯಕ್ಷರು, ಆಡಳಿತ ಮಂಡಳಿ
ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಹಾಸಂಸ್ಥಾನ, ಬೆಂಗಳೂರು.