ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (ಜಿ.ಎಸ್.ಟಿ)ಯ ನಿಯಮಗಳು ಪ್ರಯೋಜನಗಳ ಕುರಿತ “Know- GST” ಸಭೆ

varthajala
0

 ಬೆಂಗಳೂರು, ಜುಲೈ 19, (ಕರ್ನಾಟಕ ವಾರ್ತೆ): ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ 2025 ನೇ ಜುಲೈ 21 ರಂದು ಮಧ್ಯಾಹ್ನ 3.00 ಗಂಟೆಗೆ ಬೆಂಗಳೂರಿನ ಕೋರಮಂಗಲದ ಟಿ.ಟಿ.ಎಂ.ಸಿ., ಬಿ.ಎಂ.ಟಿ.ಸಿ. ಕಟ್ಟಡದ ನೆಲಮಹಡಿಯ ಸಭಾಂಗಣದಲ್ಲಿ  ಸಣ್ಣ ವರ್ತಕರಿಗೆ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (ಜಿ.ಎಸ್.ಟಿ)ಯ ನಿಯಮಗಳು, ಪ್ರಯೋಜನಗಳು, ಅನುಸರಣೆ, ರಾಜಿ ತೆರಿಗೆಯ ಮಾಹಿತಿ ಮುಂತಾದವುಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ “Know- GST” ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಸಭೆಯಲ್ಲಿ ಜಿ.ಎಸ್.ಟಿ ಕಾಯ್ದೆಯ ಕುರಿತಾದ ಮಾಹಿತಿಯನ್ನು ಮಾಧ್ಯಮಗಳ ಮುಖಾಂತರ ಸಣ್ಣ ವರ್ತಕರಿಗೆ ತಲುಪಿಸುವ ಉದ್ದೇಶವನ್ನು ಹೊಂದಲಾಗಿದ್ದು, ಮಾಧ್ಯಮದವರು ಈ ಸಭೆಯಲ್ಲಿ ಭಾಗವಹಿಸುವಂತೆ ಬೆಂಗಳೂರು ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿ-4ರ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ) ಮೀರಾ ಸುರೇಶ್ ಪಂಡಿತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)