ಆಗಸ್ಟ್ 11 ರಿಂದ ಕರ್ನಾಟಕ ವಿಧಾನಸಭೆ ಅಧಿವೇಶನ

varthajala
0

ಬೆಂಗಳೂರು, ಜುಲೈ 19, (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಭಾರತ ಸಂವಿಧಾನದ ಅನುಚ್ಛೇದ 174(1) ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ವಿಧಾನಸಭೆಯು  2025 ರ ಆಗಸ್ಟ್ 11 ರಂದು ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ಸಭಾಂಗಣದಲ್ಲಿ ಸೇರಲು ಆದೇಶಿಸಿರುತ್ತಾರೆ.

ಅದರಂತೆ, ಹದಿನಾರನೇ ವಿಧಾನಸಭೆಯ ಏಳನೆ ಅಧಿವೇಶನವು ಆಗಸ್ಟ್ 11 ರಂದು ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ.
ಆಗಸ್ಟ್ 11,12,13,18,19,20 ಮತ್ತು 22 ರಂದು ಸರ್ಕಾರಿ ಕಾರ್ಯಕಲಾಪಗಳು ಆಗಸ್ಟ್ 14 ಮತ್ತು 21 ರಂದು ಸರ್ಕಾರಿ / ಖಾಸಗಿ ಕಾರ್ಯಕಲಾಪಗಳು ಜರುಗಲಿವೆ. ಆಗಸ್ಟ್ 15 (ಸ್ವಾತಂತ್ರ್ಯ ದಿನಾಚರಣೆ) ಮತ್ತು 17 (ಭಾನುವಾರ) ದಂದು ಸಾರ್ವತ್ರಿಕ ರಜಾ ದಿನ ಇರುತ್ತದೆ. ಆಗಸ್ಟ್ 16 (ಶನಿವಾರ) ರಂದು ಕಾರ್ಯಕಲಾಪಗಳು ಇರುವುದಿಲ್ಲ ಎಂದು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)