ಜಾಗತಿಕ ಭಾಷೆಗಳ ಕೇಂದ್ರದಿಂದ 2025–26 ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

varthajala
0


ಬೆಂಗಳೂರು, ಆಗಸ್ಟ್ 25 (ಕರ್ನಾಟಕ ವಾರ್ತೆ):
ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರವು 2025–26 ನೇ ಶೈಕ್ಷಣಿಕ ಸಾಲಿನ 8 ತಿಂಗಳ ಅವಧಿಯ ಸರ್ಟಿಫಿಕೇಟ್ ಕೋರ್ಸ್‍ಗಳು ಮತ್ತು 8 ತಿಂಗಳ ಅವಧಿಯ ಅಂಡರ್ ಗ್ರ್ಯಾಜುಯೇಟ್, ಡಿಪ್ಲೊಮಾ ಮತ್ತು ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ (8 ತಿಂಗಳ ಅವಧಿ) ಕೋರ್ಸ್‍ಗಳಾದ ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಜಪಾನೀಸ್, ಚೈನೀಸ್, ಕೊರಿಯನ್ ಮತ್ತು ರಷ್ಯನ್ ವಿದೇಶಿ ಭಾಷೆಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಸರ್ಟಿಫಿಕೇಟ್ ಕೋರ್ಸ್‍ಗೆ ಅರ್ಜಿ ಸಲ್ಲಿಸಲು ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ಯಲ್ಲಿ ಉತ್ತೀರ್ಣರಾಗಿರಬೇಕು.  ಡಿಪ್ಲೊಮೊ, ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮೊ ಕೋರ್ಸ್‍ಗಳಿಗೆ ಅರ್ಜಿ ಸಲ್ಲಿಸಲು ಹಿಂದಿನ ಹಂತದ ಕೋರ್ಸ್ ಉತ್ತೀರ್ಣರಾಗಿರಬೇಕು.
ಪ್ರವೇಶ ಪಡೆಯಲು ಅರ್ಜಿಗಳನ್ನು ಸಲ್ಲಿಸಲು 2025ನೇ ಸೆಪ್ಟೆಂಬರ್ 27ನೇ ಕೊನೆಯ ದಿನಾಂಕವಾಗಿದ್ದು,  ದಂಡ ಪಾವತಿಯೊಂದಿಗೆ 2025ನೇ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 3 2025 ವರೆಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು.

ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 080-29572019 ಮೊಬೈಲ್ ಸಂಖ್ಯೆ: 6361756549 ಅಥವಾ ಬೆಂಗಳೂರು ನಗರ ವಿಶ್ವವಿದ್ಯಾಲಯ, ಜಾಗತಿಕ ಭಾಷೆಗಳ ಕೇಂದ್ರ ಪ್ಯಾಲೆಸ್ ರೋಡ್, ಪ್ರಸನ್ನಕುಮಾರ್ ಬ್ಲಾಕ್, ಹೊಸ ಅಕಾಡೆಮಿಕ್ ಬ್ಲಾಕ್, 3ನೇ ಮಹಡಿ, ಸೆಂಟ್ರಲ್ ಕಾಲೇಜ್ ಹಿಂಭಾಗ, ಮೈಸೂರು ಬ್ಯಾಂಕ್ ಸರ್ಕಲ್ ಸಮೀಪ, ಬೆಂಗಳೂರು – 560009 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0Comments

Post a Comment (0)