ಬೆಂಗಳೂರು, ಆಗಸ್ಟ್ 25, 2025: ಖತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿ (ಕ್ಯೂಐಎ) ತನ್ನ ಅಂಗಸಂಸ್ಥೆ ಖತಾರ್ ಹೋಲ್ಡಿಂಗ್ ಎಲ್ಎಲ್ಸಿ ಮೂಲಕ ಬೈಜು ರವೀಂದ್ರನ್ ಹಾಗೂ ಅವರ ನೇತೃತ್ವದ ಸಂಸ್ಥೆ ಬೈಜೂಸ್ ಇನ್ವೆಸ್ಟ್ಮೆಂಟ್ಸ್ ಪಿಟಿಇ ಲಿ. (ಬಿಐಪಿಎಲ್) ವಿರುದ್ಧ ಕಾನೂನು ಸಮರವನ್ನು ಇನ್ನಷ್ಟು ಬಿಗಿಗೊಳಿಸಿದ್ದು, 235 ಮಿಲಿಯನ್ ಡಾಲರ್ (ಅಂದಾಜು 2600 ಕೋಟಿ ರೂ.) ಹಾಗೂ 2024 ಫೆಬ್ರವರಿ 28 ಇಂದ ಪ್ರತಿ ದಿನದ ಆಧಾರದಲ್ಲಿ ಲೆಕ್ಕ ಹಾಕಿದ ವಾರ್ಷಿಕ 4% ಬಡ್ಡಿಯು ಈಗ 14 ಮಿಲಿಯನ್ ಡಾಲರ್ (ಅಂದಾಜು 123 ಕೋಟಿ ರೂ.) ಆಗಿದ್ದು, ಇದನ್ನು ಪಾವತಿ ಮಾಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಲಾಗುತ್ತಿದೆ.
ಈ ವಿವಾದವು, ಬಿಐಪಿಎಲ್ಗೆ 150 ಮಿಲಿಯನ್ ಡಾಲರ್ ಮೊತ್ತವನ್ನು ಖತಾರ್ ಹೋಲ್ಡಿಂಗ್ಗೆ 2022 ಸೆಪ್ಟೆಂಬರ್ನಲ್ಲಿ ನೀಡಿದ ಸಮಯದಿಂದ ಆರಂಭವಾಗಿತ್ತು. ಥಿಂಕ್ & ಲರ್ನ್ ಪ್ರೈ. ಲಿ. (ಬೈಜೂಸ್ – ಸಮಸ್ಯೆಗೀಡಾದ ಭಾರತೀಯ ಎಡ್ಟೆಕ್ ಕಂಪನಿ) ಸಂಸ್ಥಾಪಕ ಮತ್ತು ಪ್ರಧಾನ ಷೇರುದಾರ ಬೈಜು ರವೀಂದ್ರನ್ ಅವರ ವೈಯಕ್ತಿಕ ಖಾತರಿಯ ಮೇರೆಗೆ ಸಾಲ ನೀಡಲಾಗಿತ್ತು. ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿ.ನಲ್ಲಿನ 17,891,289 ಷೇರುಗಳ ಖರೀದಿಗೆ ಈ ಹಣ ಬಳಕೆ ಮಾಡಲಾಗಿತ್ತು. ಈ ಷೇರುಗಳನ್ನು ವರ್ಗಾವಣೆ ಮಾಡುವುದಕ್ಕೆ ಯಾವುದೇ ಸ್ಪಷ್ಟ ನಿರ್ಬಂಧ ಇರಲಿಲ್ಲ. ಕರಾರಿಗೆ ವಿರುದ್ಧವಾಗಿ, ಷೇರುಗಳನ್ನು ರವೀಂದ್ರನ್ ನಿಯಂತ್ರಣದಲ್ಲಿರುವ ಇನ್ನೊಂದು ಸಿಂಗಾಪುರ ಮೂಲದ ಕಾರ್ಪೊರೇಟ್ ಸಂಸ್ಥೆಗೆ ವರ್ಗಾವಣೆ ಮಾಡಲಾಗಿತ್ತು.
ಪದೇ ಪದೇ ಡೀಫಾಲ್ಟ್ ಆದ ನಂತರ ಖತಾರ್ ಹೋಲ್ಡಿಂಗ್ ಹಣಕಾಸು ವ್ಯವಸ್ಥೆಯನ್ನು ನಿರಾಕರಿಸಿತು ಮತ್ತು 235 ಮಿಲಿಯನ್ ಡಾಲರ್ ಮರುಪಾವತಿ ಮಾಡುವಂತೆ ಸೂಚಿಸಿತು. ಆದರೆ, ಬಿಐಪಿಎಲ್ ಮತ್ತು ರವೀಂದ್ರನ್ ಇಬ್ಬರೂ ಒಪ್ಪಂದ ಮತ್ತು ವೈಯಕ್ತಿಕ ಗ್ಯಾರಂಟಿ ಅಡಿಯಲ್ಲಿ ಬಾಧ್ಯತೆಗಳನ್ನು ಪೂರೈಸಲು ವಿಫಲವಾದವು.
ಜಾಗತಿಕವಾಗಿ ಆದೇಶವನ್ನು ಸ್ಥಗಿತಗೊಳಿಸುವಿಕೆ
2024 ಮಾರ್ಚ್ನಲ್ಲಿ ಖತಾರ್ ಹೋಲ್ಡಿಂಗ್ ಸಿಂಗಾಪುರದಲ್ಲಿ ದಾವೆಯನ್ನು ಆರಂಭಿಸಿತು. ಸ್ವತ್ತುಗಳು ವೆಚ್ಚವಾಗುವ ಭೀತಿಯಿಂದಾಗಿ 235 ಮಿಲಿಯನ್ ಡಾಲರ್ ವರೆಗಿನ ಮೌಲ್ಯದ ಬಿಐಪಿಎಲ್ ಮತ್ತು ರವೀಂದ್ರನ್ ಅವರ ಫಂಡ್ ಮತ್ತು ಅಸೆಟ್ಗಳನ್ನು ಜಾಗತಿಕ ಮಟ್ಟದಲ್ಲಿ ಜಪ್ತಿ ಮಾಡುವಂತೆ
ಎಮರ್ಜೆನ್ಸಿ ಆರ್ಬಿಟ್ರೇಟರ್ ಆದೇಶ ನೀಡಿತು. ನಂತರ ಸಿಂಗಾಪುರದ ಉಚ್ಚ ನ್ಯಾಲಾಯವು ಈ ಆದೇಶವನ್ನು ಮತ್ತು ಜಾಗತಿಕ ಮಟ್ಟದಲ್ಲಿ ಜಪ್ತಿ ಆದೇಶವನ್ನು ದೃಢೀಕರಿಸಿತು.
ನ್ಯಾಯಮಂಡಳಿಯ ಅಂತಿಮ ಆದೇಶ
2025 ಜುಲೈ 14 ರಂದು ಖತಾರ್ ಹೋಲ್ಡಿಂಗ್ಗೆ 235 ಮಿಲಿಯನ್ ಡಾಲರ್ ಪಾವತಿ ಮಾಡುವಂತೆ ನ್ಯಾಯಮಂಡಳಿಯು ಆದೇಶ ನೀಡಿತು. ಅಲ್ಲದೆ, 2024 ಫೆಬ್ರವರಿಯಿಂದ 4% ರಂತೆ ಪ್ರತಿ ದಿನದ ಪ್ರಕಾರ ಲೆಕ್ಕಾಚಾರ ಮಾಡಿ ಬಡ್ಡಿಯನ್ನೂ ಪಾವತಿ ಮಾಡುವಂತೆ ಆದೇಶಿಸಲಾಗಿತ್ತು.
ಈ ಬಡ್ಡಿ ಮೊತ್ತವು ಈಗಾಗಲೇ 14 ಮಿಲಿಯನ್ ಡಾಲರ್ (ಅಂದಾಜು 123 ಕೋಟಿ ರೂ.) ಆಗಿದೆ ಮತ್ತು 249 ಮಿಲಿಯನ ಡಾಲರ್ಗೂ (ಅಂದಾಜು 2183 ಕೋಟಿ ರೂ.) ಹೆಚ್ಚು ಒಟ್ಟು ಬಾಧ್ಯತೆಯ ಏರಿಕೆಯಾಗಿದೆ.
ಭಾರತದಲ್ಲಿ ಜಾರಿ
ಈ ದಾವೆಯನ್ನು ಜಾರಿಗೊಳಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ 2025 ಆಗಸ್ಟ್ 12 ರಂದು ಖತಾರ್ ಹೋಲ್ಡಿಂಗ್ ದಾವೆ ಸಲ್ಲಿಸಿತು. ಕೋರ್ಟ್ನ ಡಿಕ್ರಿ ಎಂಬಂತೆ ಈ ಆದೇಶವನ್ನು ಜಾರಿಗೊಳಿಸಲು ದಾವೆಯು ಆಗ್ರಹಿಸಿದ್ದು, ರವೀಂದ್ರನ್ ಅಥವಾ ಬಿಐಪಿಎಲ್ ಅಸೆಟ್ಗಳನ್ನು ವರ್ಗಾವಣೆ ಮಾಡಲು ನಿರ್ಬಂಧ ಹೇರುವಂತೆ ಸೂಚಿಸಿದೆ. ಅಲ್ಲದೆ, ಭಾರತದಲ್ಲಿನ ಚರ ಮತ್ತು ಸ್ಥಿರ ಆಸ್ತಿಯ ಜಪ್ತಿ/ಮಾರಾಟ ತಡೆಯನ್ನೂ ಆಗ್ರಹಿಸಿದೆ.
ಬೈಜು ರವೀಂದ್ರನ್ ಮೇಲೆ ಕಾನೂನು ವಿಚಕ್ಷಣೆ ವರ್ಧನೆ
ರವೀಂದ್ರನ್ ವಿರುದ್ಧ ಜಾಗತಿಕ ಮಟ್ಟದಲ್ಲಿ ಪ್ರಕರಣಗಳು ಬಿಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ಯೂಐಎ ಕ್ರಮವು ಹೊಸ ದಾವೆಯಾಗಿದೆ. ಅಮೆರಿಕದಲ್ಲಿ ದಿವಾಳಿತನದಲ್ಲಿ ವಿಚಾರಣೆಗೆ ಅವರು ಒಳಪಟ್ಟಿದ್ದಾರೆ ಮತ್ತು ಪ್ರತಿ ದಿನಕ್ಕೆ 10,000 ಡಾಲರ್ (8.7 ಲಕ್ಷ ರೂ.) ಪಾವತಿ ಮಾಡುವಂತೆ ಸೂಚಿಸಲಾಗಿದೆ. ಥಿಂಕ್ & ಲರ್ನ್ (ಅಂದರೆ ಬೈಜೂಸ್) ಅಂಗಸಂಸ್ಥೆಯು 1.2 ಬಿಲಿಯನ್ ಡಾಲರ್ನಲ್ಲಿ 533 ಮಿಲಿಯನ್ ಡಾಲರ್ ಕಣ್ಮರೆಯಾಗಿದೆ ಎಂಬ ಆರೋಪವಿದೆ. ಹೀಗೆ ಕಾಣೆಯಾದ ಹಣವನ್ನು "ಸಾಲದಾತರು ಕಂಡುಹಿಡಿಯಲು ಸಾಧ್ಯವಿಲ್ಲ" ಎಂಬಂತಹ ಹೇಳಿಕೆಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.
ಈ ಮಧ್ಯೆ, ಅವರು ಆರಂಭಿಸಿದ ಸ್ವಂತ ಕಂಪನಿ ಬೈಜೂಸ್ ದಿವಾಳಿ ದಾವೆಯನ್ನು ಮುಂದುವರಿಸಿದ್ದು, ಆಡಳಿತ ಮಂಡಳಿ ಮಟ್ಟದಲ್ಲಿನ ವಿಪತ್ತಿನಿಂದಾಗಿಯೇ ಈ ಸಮಸ್ಯೆಯಾಗಿದೆ ಎಂದು ಸಂಬಂಧಿತರು ಆರೋಪಿಸಿದ್ದಾರೆ.
ಖತಾರ್ ಹೋಲ್ಡಿಂಗ್ ಒಪ್ಪಂದಕ್ಕೆ ಅನುಗುಣವಾಗಿ ನೀಡಿದ ಮೊತ್ತವನ್ನು ಮರುಪಡೆಯಲು ಇದು ಕಾನೂನಾತ್ಮಕ ಪ್ರತಿಕ್ರಿಯೆಯಾಗಿದೆ. ಜಾಗತಿಕ ಮಟ್ಟದಲ್ಲಿ ಆಸ್ತಿ ಜಪ್ತಿ ಆದೇಶ ಮತ್ತು ವಿವಿಧ ದಾವೆಗಳ ಹಿನ್ನೆಲೆಯಲ್ಲಿ, ರವೀಂದ್ರನ್ ಮತ್ತು ಅವರ ಸಂಸ್ಥೆಯನ್ನು ಹೊಣೆಗಾರರನ್ನಾಗಿಸುವ ಎಲ್ಲ ಪ್ರಯತ್ನವನ್ನೂ ಸಾವರಿನ್ ವೆಲ್ತ್ ಫಂಡ್ ಮಾಡಲಿದೆ.