2025ನೇ ಸಾಲಿನ ಕರ್ನಾಟಕ ಸೌಹಾರ್ಧ ಸಹಕಾರಿ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಮುಖ್ಯಮಂತ್ರಿಗಳ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕೋರಿದರು.
ಸೌಹಾರ್ದ ಸಹಕಾರಿ ಬ್ಯಾಂಕುಗಳನ್ನು ಹೊರತುಪಡಿಸಿ, ಪ್ರತಿಯೊಂದು ಸಹಕಾರಿಯು ಸಹಕಾರಿ ವರ್ಷದ ಪ್ರತಿ ತ್ರೈಮಾಸಿಕದ ಅಂತ್ಯಕ್ಕೆ ಹೊಂದಿರುವ ಒಟ್ಟು ಠೇವಣಿಯ ಶೇ 20 ರಷ್ಟನ್ನು ರಾಜ್ಯ ಶಾಸನಬದ್ಧ ಮೀಸಲು ದ್ರವ್ಯ ರೂಪದಲ್ಲಿ ಕಡ್ಡಾಯವಾಗಿ ಪ್ರಕರಣ 18ರ ನಿರ್ವಹಣೆ ಮಾಡತಕ್ಕದ್ದು. ಸೌಹಾರ್ದ ಸಹಕಾರಿಗೆ ತಕ್ಷಣದ ಬಳಕೆಗಾಗಿ ಅಗತ್ಯವಿಲ್ಲದ ನಿಧಿಗಳನ್ನು ಅದರ ವ್ಯವಹಾರಗಳ ಹೊರಗೆ ಹೂಡಲು ಮತ್ತು ಠೇವಣಿಯಿರಿಸಲು ಉಪಬಂಧ ಕಲ್ಪಿಸಲು, ಪತ್ತಿನ ಚಟುವಟಿಕೆ ನಡೆಸುವ ಯಾವುದೇ ಸಹಕಾರಿಯು ತಾನು ಸಂಗ್ರಹಿಸಿದ ಠೇವಣಿಯನ್ನು ಸಾಲ ನೀಡಿಕೆ ಅಥವಾ ಹೂಡಿಕೆಯ ಹೊರತಾಗಿ ಯಾವುದೇ ಪತ್ತೇತರ ಚಟುವಟಿಕೆಗಳಿಗೆ ವಿನಿಯೋಗಿಸತಕ್ಕದಲ್ಲ, ವಂಚನೆಯ ವರದಿಯಲ್ಲಿರುವ ಅಕ್ರಮ ಅಥವಾ ವಂಚನೆ ದುರ್ವಿನಿಯೋಗದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದು. ಒಟ್ಟಾರೆ ಆರ್ಥಿಕ ಶಿಸ್ತು ಮತ್ತು ಹೊಣೆಗಾರಿಕೆ ಇರಬೇಕು.
ಸದನದಲ್ಲಿ ಶಾಸಕರಾದ ಅರವಿಂದ್ ಬೆಲ್ಲದ್, ಮಹಾಂತೇಶ್ ಕೌಜಲಗಿ, ಜೆ.ಟಿ.ಪಾಟೀಲ್, ಯಶ್ ಪಾಲ್, ಸ್ವಾಮಿ ಇನ್ನಿತರ ಶಾಸಕರು ಸದರಿ ವಿಧೇಯಕದಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಸದನದ ಗಮನಕ್ಕೆ ತಿಳಿಸಿದರು. ತಿದ್ದುಪಡಿಯೊಂದಿಗೆ ವಿಧೇಯಕವು ಅಂಗೀಕಾರವಾಯಿತು.