ಬೆಂಗಳೂರು,ಆಗಸ್ಟ್ 19 (ಕರ್ನಾಟಕ ವಾರ್ತೆ): 2025ನೇ ಸಾಲಿನ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ (ತಿದ್ದುಪಡಿ) ವಿಧೇಯಕವನ್ನು ಸಾರಿಗೆ ಮತ್ತು ಮುಜುರಾಯಿ ಸಚಿವ ರಾಮಾಲಿಂಗಾರೆಡ್ಡಿ ಅವರು ಪರ್ಯಾಲೋಚಿಸಿ ಅಂಗೀಕರಿಸಲು ಕೋರಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
2025ನೇ ಸಾಲಿನ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕವನ್ನು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಅವರು ಪರ್ಯಾಲೋಚಿಸಿ ಅಂಗೀಕರಿಸಲು ಕೋರಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
2025ನೇ ಸಾಲಿನ ಕರ್ನಾಟಕ ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ಫೀಜುಗಳು (ತಿದ್ದುಪಡಿ) ವಿಧೇಯಕವನ್ನು ಮೀನುಗಾರಿಕೆ. ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಅವರು ಪರ್ಯಾಲೋಚಿಸಿ ಅಂಗೀಕರಿಸಲು ಕೋರಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು
2025ನೇ ಸಾಲಿನ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕವನ್ನು ಕಾರ್ಮಿಕ ಸಚಿವರ ಸಂತೋμï ಎಸ್ ಲಾಡ್ ಅವರು ಪರ್ಯಾಲೋಚಿಸಿ ಅಂಗೀಕರಿಸಲು ಕೋರಿದರು. ಸದನದಲ್ಲಿ ಸಚಿವರು ಹಾಗೂ ಶಾಸಕರು ವಿಧೇಯಕದ ಕುರಿತು ಚರ್ಚಿಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.