ಕರ್ನಾಟಕ ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ತುಂಬುವ ಫೀಜುಗಳು) (ತಿದ್ದುಪಡಿ) ವಿಧೇಯಕ 2025 ಅಂಗೀಕಾರ

varthajala
0

 ಬೆಂಗಳೂರು, ಆಗಸ್ಟ್ 21, (ಕರ್ನಾಟಕ ವಾರ್ತೆ) :

ಕರ್ನಾಟಕ ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ತುಂಬುವ ಫೀಜುಗಳು)  (ತಿದ್ದುಪಡಿ) ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ  ಅಂಗೀಕಾರ ದೊರೆಯಿತು.
ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ತುಂಬುವ ಫೀಜುಗಳು) (ತಿದ್ದುಪಡಿ) ವಿಧೇಯಕ”ವನ್ನು ಮಾನ್ಯ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್. ವೈದ್ಯ  ಅವರು ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.
ಸದನದಲ್ಲಿ ಯಾವುದೇ ಚರ್ಚೆಯಾಗದೆ “ಕರ್ನಾಟಕ ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ತುಂಬುವ ಫೀಜುಗಳು) (ತಿದ್ದುಪಡಿ) ವಿಧೇಯಕ 2025ಕ್ಕೆ” ಮಾನ್ಯ ಸಭಾಪತಿಗಳಿಂದ ಅಂಗೀಕಾರ ದೊರೆಯಿತು.

Post a Comment

0Comments

Post a Comment (0)