ಬೆಂಗಳೂರು, ಆಗಸ್ಟ್ 21, (ಕರ್ನಾಟಕ ವಾರ್ತೆ) :
ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ದೊರೆಯಿತು.
ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ವಿಧೇಯಕ”ವನ್ನು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಸಭಾ ನಾಯಕರಾದ ಎನ್.ಎಸ್. ಭೋಸರಾಜು ಅವರು ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.
ಅಂತರ್ಜಲ ವೃದ್ದಿಗೆ ಸರ್ಕಾರವು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಅಂತರ್ಜಲ ಉಳಿವಿಗಾಗಿ ಅಂತರ್ಜಲದ ನೀರನ್ನು ಯಥೇಚ್ಚವಾಗಿ ಉಪಯೋಗಿಸುವರಿಗೆ ಹಾಗೂ ಟ್ಯಾಂಕರ್‍ಗಳಿಗೆ ಶುಲ್ಕ ವಿಧಿಸುವ ಸಲುವಾಗಿ ವಿಧೇಯಕದಲ್ಲಿ ತಿದ್ದುಪಡಿ ತರುವುದು ಅವಶ್ಯಕವಾಗಿದೆ. ಇಪ್ಪತ್ತೈದು ಸಾವಿರ ಲೀಟರ್ ನೀರು ಉಪಯೋಗಿಸುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ, ಇಪ್ಪತ್ತೈದು ಸಾವಿರದಿಂದ ಒಂದು ಲಕ್ಷದ ವರೆÀಗೆ ನೀರನ್ನು ಉಪಯೋಗಿಸುವವರಿಗೆ ಪ್ರತಿ ಸಾವಿರ ಲೀಟರ್‍ಗೆ ರೂ 1.00 ರಂತೆ ಶುಲ್ಕ ಹಾಗೂ ಒಂದು ಲಕ್ಷಕ್ಕಿಂತ ಮೇಲ್ಪಟ್ಟು ಹೆಚ್ಚಾಗಿ ನೀರು ಉಪಯೋಗಿಸುವವರಿಗೆ ಪ್ರತಿ ಸಾವಿರ ಲೀಟರ್‍ಗೆ ರೂ. 2.00 ರಂತೆ ಶುಲ್ಕ ವಿಧಿಸುವ ಸಂಬಂಧವಾಗಿ ಈ ವಿಧೇಯಕದಲ್ಲಿ ಅಲ್ಪ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ತಿಳಿಸುತ್ತಾ ಅಂಗೀಕಾರಕ್ಕಾಗಿ ಕೋರಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಐವಾನ್ ಡಿಸೋಜಾ, ಪಿ.ಹೆಚ್. ಪೂಜಾರ್, ಗೋವಿಂದರಾಜು, ಟಿ.ಎ. ಶರವಣ, ಡಿ.ಎಸ್. ಅರುಣ್, ಮಂಜೇಗೌಡ, ಡಿ.ಟಿ. ಶ್ರೀನಿವಾಸ್, ಚಿದಾನಂದಗೌಡ, ಗೋಪಿನಾಥ್, ರವಿಕುಮಾರ್, ಶ್ರೀಮತಿ ಭಾರತಿ ಶೆಟ್ಟಿ, ಡಾ. ಉಮಾಶ್ರೀ, ಶ್ರೀಮತಿ ಬಲ್ಕಿಸ್ ಬಾನು ಅವರುಗಳ ಸ್ಪಷ್ಟನೆಗಳಿಗೆ ಉತ್ತರ ನೀಡಿದ ಸಚಿವರು ಮಾನ್ಯ ಸಭಾಪತಿಗಳನ್ನು ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಕೋರಿದರು. ಮಾನ್ಯ ಸಭಾಪತಿಗಳಿಂದ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ವಿಧೇಯಕ 2025 ಕ್ಕೆ ಅಂಗೀಕಾರ ದೊರೆಯಿತು.