*ಕರ್ನಾಟಕ ರಾಜ್ಯದಲ್ಲಿ ಮೀಸಲಾತಿಯನ್ನು ಶೇಕಡ 50ಕ್ಕೆ ಮಿತಿಗೊಳಿಸುವ ಕುರಿತು ಅಹಿಂಸಾ ಸಂಘಟನೆ ಒತ್ತಾಯ*

varthajala
0

 ಬೆಂಗಳೂರು, ಪ್ರೆಸ್ ಕ್ಲಬ್ ಸಭಾಂಗಣ: ಕರ್ನಾಟಕ ರಾಜ್ಯದಲ್ಲಿ ಮೀಸಲಾತಿಯನ್ನು ಶೇಕಡ 50ಕ್ಕೆ ಮಿತಿಗೊಳಿಸುವ ಬಗ್ಗೆ ಅಹಿಂಸಾ ಸಂಸ್ಥೆ ವತಿಯಿಂದ ಮಾಧ್ಯಮಗೋಷ್ಟೀ ಏರ್ಪಡಿಸಲಾಗಿತ್ತು.

ಅಹಿಂಸಾ ಅಧ್ಯಕ್ಷರಾದ ಎಂ.ನಾಗರಾಜುರವರು ಮತ್ತು ಪ್ರಧಾನ ಕಾರ್ಯದರ್ಶಿ ಎಲ್.ರವಿ, ಸಂಘಟನಾ ಕಾರ್ಯದರ್ಶಿ ಬಿ.ಪೀತಾಂಬರ ಸ್ವಾಮಿ, ಸಮಿತಿ ಸದಸ್ಯರಾದ ನಾಗರಾಜ್ ರವರು ಭಾಗವಹಿಸಿದ್ದರು.
ಕರ್ನಾಟಕ ಸರ್ಕಾರವು 2023ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಯಾವುದೇ ಸಂವೀಧಾನಾತ್ಮಕ ಮತ್ತು ಕಾನೂನಾತ್ಮಕ ರಕ್ಷಣೆ ಇಲ್ಲದೆ adequate representation ಇದ್ದಾಗ್ಯೂ ಪರಿಶಿಷ್ಟ ಜಾತಿಗೆ ಶೇಕಡ 15 ರಿಂದ ಶೇಕಡ 17ಕ್ಕೆ ಹೆಚ್ಚಿಸಿ ಪರಿಶಿಷ್ಟ ಪಂಗಡಕ್ಕೆ ಶೇಕಡ 3 ರಿಂದ ಶೇಕಡ 7ಕ್ಕೆ ಹೆಚ್ಚಿಸಿ ಒಟ್ಟು ಮೀಸಲಾತಿಯನ್ನು ಶೇಕಡ 56ಕ್ಕೆ ಹೆಚ್ಚಿಸಿರುತ್ತದೆ. ಇದೊಂದು ಅಸಂವಿಧಾನಿಕ ಆದೇಶವಾಗಿದ್ದು, ಇತ್ತೀಚೆಗೆ ಕರ್ನಾಟಕ ಆಡಳಿತ ನಾಯ ಮಂಡಳಿಯಲಿ ಅರ್ಜಿ ಸಂ: 2144/2024ರ ಆದೇಶ ದಿನಾಂಕ 28.05.2025 ರಲ್ಲಿ ಕರ್ನಾಟಕ ಸರ್ಕಾರ ನೇರ ಮೀಸಲಾತಿಯನ್ನು ಶೇಕಡ 56ಕ್ಕೆ ಹೆಚ್ಚಿಸಿದ್ದ ಆದೇಶವನ್ನು ರದ್ದುಗೊಳಿಸಿ ಮೀಸಲಾತಿಯನ್ನು ಶೇಕಡ 50ಕ್ಕೆ ಮಿತಿಗೊಳಿಸಬೇಕೆಂದು ಆದೇಶ ನೀಡಿರುತ್ತದೆ.
ಕರ್ನಾಟಕ ಸರ್ಕಾರವು 1992ರಲ್ಲಿ ಮೀಸಲಾತಿಯನ್ನು ಶೇ50ರಿಂದ ಶೇ 68ಕ್ಕೆ ಎರಿಕೆ ಮಾಡಿದ್ದರು, ಅದನ್ನ ಪ್ರಶ್ನಿಸಿ ಶ್ರೀ ಎಸ್.ವಿ.ಜೋಶಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ ಪರಿಗಣಿಸಿ ಶೇಕಡ50ರನ್ನು ಮೀರಬಾರದೆಂದು ಆದೇಶಿಸಿತ್ತು,ತದನಂತರ ಮೀಸಲಾತಿಯನ್ನು ಪುನರ್ ನಿಗದಿ ಪಡಿಸಿ ಶೇಕಡ 50ಕ್ಕೆ ಇಳಿಸಲಾಯಿತು.
ತದನಂತರ ಕರ್ನಾಟಕ ಸರ್ಕಾರವು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಂ 17968/2025 ರಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುತ್ತದೆ. ಆದರೆ ನ್ಯಾಯಾಲಯವು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಆದೇಶಕ್ಕೆ ಯಾವುದೇ ತಡೆಯಾಜ್ಞೆ ನೀಡಿರುವುದಿಲ್ಲ. ಆದರೆ ಪರೀಕ್ಷೆಯ ವಿವಿಧ ಹಂತಗಳನ್ನು ಪೂರ್ಣಗೊಳಿಸಲು ಮತ್ತು ಫಲಿತಾಂಶವನ್ನು ಪ್ರಕಟಿಸದಿರಲು ದಿನಾಂಕ 31.07.2025ರಂದು ಮಧ್ಯಂತರ ಆದೇಶದಲ್ಲಿ ಸೂಚಿಸಿರುತ್ತದೆ. ಜೊತೆಗೆ ಶೇಕಡ 50ಕ್ಕಿಂತ ಹೆಚ್ಚು ಮೀಸಲಾತಿಯನ್ನು ನೀಡಿರುವ ಅಸಂವಿಧಾನಿಕ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಇನ್ನೂ ಹಲವಾರು ಅರ್ಜಿಗಳನ್ನು ಇತ್ತೀಚೆಗೆ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಬಾಕಿ ಉಳಿದಿರುತ್ತವೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಾತಿನಿಧ್ಯವು ಶೇಕಡ 25.41% ಅಂದರೆ adequate representation ಇರುವುದರಿಂದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದ ಶಿಫಾರಸ್ಸಿನನ್ವಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿಯ ಪ್ರಮಾಣವನ್ನು ನಿರ್ಧರಿಸುವಾಗ ಸರ್ಕಾರವು ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠದ ಆದೇಶದನ್ವಯ ಒಟ್ಟು ಮೀಸಲಾತಿಯನ್ನು ಶೇಕಡ 50ಕ್ಕೆ ಮಿತಿಗೊಳಿಸಿ ಹಿಂದುಳಿದ ವರ್ಗಗಳಿಗೆ ನೀಡಿರುವ ಶೇಕಡ 32ರಷ್ಟು ಮೀಸಲಾತಿಯ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಕೋರಿದೆ. ಸರ್ಕಾರವು
ಮೀಸಲಾತಿಯನ್ನು ಶೇಕಡ 56ರಷ್ಟು ಹೆಚ್ಚಿಸಿರುವ ಆದೇಶವು ನ್ಯಾಯಾಲಯದ ಅಧೀನ ವಿಚಾರ (subjudice) ಆಗಿರುವುದರಿಂದ ಸರ್ಕಾರವು ಈ ಹಂತದಲ್ಲಿ ಶೇಕಡ 50ಕ್ಕಿಂತಲೂ ಅಧಿಕ ಮೀಸಲಾತಿ ನೀಡಲು ಮಾಡಬಹುದಾದ ಯಾವುದೇ ತೀರ್ಮಾನವು ನ್ಯಾಯಾಲಯ ನಿಂದನೆ ಹಾಗೂ ಕಾನೂನು ಬಾಹಿರವಾಗುತ್ತದೆ. ಒಂದು ವೇಳೆ ಹಿಂದುಳಿದ ವರ್ಗಗಳಿಗೆ ನೀಡಿರುವ ಶೇಕಡ 32ರ ಮೀಸಲಾತಿಯಲ್ಲಿ ಕಡಿತಗೊಳಿಸಿದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಮತ್ತು ಸಾಮಾನ್ಯ ವರ್ಗದವರು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಆದುದರಿಂದ ಸರ್ಕಾರವು ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ಕ್ರಮಕೈಗೊಳ್ಳಲು ಕೋರಲಾಗಿದೆ.

Post a Comment

0Comments

Post a Comment (0)