ಕಾಣೆಯಾದ ಬಾಲಕಿ ಪತ್ತೆಗಾಗಿ ಮನವಿ

varthajala
0

ಬೆಂಗಳೂರು ನಗರ ಜಿಲ್ಲೆ,  :  ನಗರದ ವರ್ತೂರಿನ ಆರ್‍.ಬಿ,ಡಬ್ಲೂ  ಬ್ರಿಕ್ಸ್ ಹತ್ತಿರದನಿವಾಸಿಯರಬೀಯಾ   ಬೇಗಂ ಮಗಳಾದ   ಕು.ಜಮ್ಮಿ ಬೇಗಂ (14 ವರ್ಷ)  ಇವರು  ಫೆಬ್ರವರಿ 20,2024 ರಂದು  ಮಧ್ಯಾಹ್ನ 2.00 ಗಂಟೆಯಲ್ಲಿ  ಮನೆಯಿಂದ ಹೊರ ಹೋದವರು ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡಿಕಿದರು ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ನಗರದ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ಚಹರೆ  ಇಂತಿವೆ: 4.2 ಅಡಿ ಎತ್ತರ, ಗೋದಿ ಮೈಬಣ್ಣ, ದುಂಡು ಮುಖ, ಕಪ್ಪು ಬಣ್ಣದ ತಲೆ ಕೂದಲು. ಕೆಂಪು ಬಣ್ಣದ ಟಾಪ್‍ ಧರಿಸಿರುತ್ತಾಳೆ. ಹಿಂದಿ ಭಾಷೆಯನ್ನು ಮಾತನಾಡುತ್ತಾಳೆ.

ಕಾಣೆಯಾದವರು ಪತ್ತೆಯಾದಲ್ಲಿ ವರ್ತೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು. ಅಥವಾ ದೂರವಾಣಿ ಸಂಖ್ಯೆ: 080-28539196, ಮೊಬೈಲ್ ನಂ: 9480801618 ಮೂಲಕ ಮಾಹಿತಿಯನ್ನು ನೀಡಬಹುದು ಎಂದು ವರ್ತೂರು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

VK DIGITAL NEWS:ಮಹಾ ಮಹಿಮರು ಶ್ರೀ ರಾಘವೇಂದ್ರ ತೀರ್ಥರು


Post a Comment

0Comments

Post a Comment (0)