ಬೆಂಗಳೂರು, ಆಗಸ್ಟ್ 19, (ಕರ್ನಾಟಕ ವಾರ್ತೆ) : ಮೈಸೂರು ವಿಶ್ವವಿದ್ಯಾನಿಲಯವು ದಿನಾಂಕ:23-12-2024 ಹಾಗೂ 24-12-2024ರಂದು ಪಿಎಚ್.ಡಿ. ಪದವಿಗೆ ನೋಂದಣಿ ಮಾಡಿಕೊಳ್ಳಲು ವಿವಿಧ ವಿಷಯಗಳಲ್ಲಿ ಪ್ರವೇಶ ಪರೀಕ್ಷೆಗಳನ್ನು ಆಯೋಜಿಸಿ ದಿನಾಂಕ: 03-03-2025 ಫಲಿತಾಂಶ ಪ್ರಕಟಿಸಿದೆ. ಪಿಎಚ್.ಡಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪಡೆದ 186 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವನ್ನು ಒಳಗೊಂಡಂತೆ ತನ್ನ ವ್ಯಾಪ್ತಿಯಲ್ಲಿ ಬರುವ ವಿವಿಧ ಸಂಯೋಜಿತ ಕಾಲೇಜುಗಳಿಂದ ಅರ್ಹ ಮಾರ್ಗದರ್ಶಕರಾಗಿ ಪಡೆಯಲು ಕ್ರಮವಹಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ, ಪರಿಷತ್ ಸದಸ್ಯೆ ಡಾ. ಉಮಾಶ್ರೀ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಪಿ.ಎಚ್.ಡಿ ನೋಂದಣಿ ಮಾಡಿಕೊಳ್ಳಲು ಮಾರ್ಗದರ್ಶಕರ ಬಳಿ ಅಭ್ಯರ್ಥಿಗಳ ಲಭ್ಯತೆ ಖಾಲಿ ಇದ್ದಲ್ಲಿ ಅರ್ಹ ಅಭ್ಯರ್ಥಿಗಳು ಅಂತಹ ಮಾರ್ಗದರ್ಶಕರಿಂದ ಸಮ್ಮತಿ ಪತ್ರ ಪಡೆದು, ಸಲ್ಲಿಸಿದ್ದಲ್ಲಿ ವಿಶ್ವವಿದ್ಯಾನಿಲಯವು ಅಂತಹ ವಿದ್ಯಾರ್ಥಿಗಳಿಗೆ ಪ್ರಥಮವಾಗಿ ತಾತ್ಕಾಲಿಕ ನೋಂದಣಿಗೆ ಅನುಮತಿ ನೀಡಲು ಕ್ರಮವಹಿಸುತ್ತಿದೆ. ವಿಶ್ವವಿದ್ಯಾನಿಲಯವು ನಡೆಸುವ ಪಿಎಚ್.ಡಿ. ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಪ್ರಮಾಣ ಪತ್ರಕ್ಕೆ ಮೂರು ವರ್ಷಗಳವರೆಗೆ ಮಾನ್ಯತೆಯಿದ್ದು, ಆಯಾ ಮಾರ್ಗದರ್ಶಕರ ಅಡಿಯಲ್ಲಿ ಖಾಲಿಯಾಗುವ ಎದುರಿಗೆ ಅವರ ಸಮ್ಮತಿ ಪತ್ರದೊಡನೆ ನಿಯಮಾನುಸಾರ ಭರ್ತಿ ಮಾಡಿಕೊಳ್ಳಲು ವಿಶ್ವವಿದ್ಯಾಲಯವು ಅವಕಾಶ ಕಲ್ಪಿಸಿರುತ್ತದೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಪ್ರಕರಣ 33 ಅಧ್ಯಯನ ಮಂಡಳಿ (Board of Studies) ರನ್ವಯ ವಿಶ್ವವಿದ್ಯಾಲಯವು ಪದವಿ ಪೂರ್ವ ಅಧ್ಯಯನಗಳಿಗಾಗಿ ಮತ್ತು ಸ್ನಾತಕೋತ್ತರ ಅಧ್ಯಯನಗಳಿಗಾಗಿ ಪ್ರತ್ಯೇಕ ಅಧ್ಯಯನ ಮಂಡಳಿಯಿದ್ದು, UGC (Minimum Standards and Procedures for Award of PhD Degree) Regulations, 2022ರಲ್ಲಿ ಸಂಶೋಧಕರ ಮೇಲ್ವಿಚಾರಕರಿಗೆ ಸಂಬಂಧಿಸಿದಂತೆ, Adjunct Faculty members shall not act as Research Supervisors and can only act as co-supervisors; (1) An eligible Professor/Assistant Professor can guide up to eight (8)/six (06)/ four (04), Ph.D scholars, respectively, at any given time. (2) In case of interdisciplinary/ multidisciplinary research work, if required, a Co-Supervisor from outside the Department/School/Centre/ University may be appointed ನಿಯಮಗಳನ್ನು ಉಪಬಂಧಿಸಲಾಗಿರುತ್ತದೆ;
ಈ ಮಾರ್ಗಸೂಚಿಗಳನ್ವಯ ವಿಶ್ವವಿದ್ಯಾಲಯದಲ್ಲಿ ಬೋಧಕ ಹುದ್ದೆಗಳ ಕೊರತೆಯಿರುವುದರಿಂದ ಪಿ.ಎಚ್.ಡಿ ಸಾಮಾನ್ಯ ಪ್ರವೇಶ ಪರೀಕ್ಷೆ ತೇರ್ಗಡೆಯಾಗಿ ಅರ್ಹತೆ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರನ್ನು ನೇಮಕ ಮಾಡಲು ಸಾಧ್ಯವಾಗುತ್ತಿಲ್ಲ.
ಮೈಸೂರು ವಿಶ್ವವಿದ್ಯಾಲಯವನ್ನು ಒಳಗೊಂಡಂತೆ ರಾಜ್ಯದ ಎಲ್ಲಾ ಸಾರ್ವಜನಿಕ ವಿಶ್ವವಿದ್ಯಾಲಯಗಳ ಆರ್ಥಿಕ ಪರಿಸ್ಥಿತಿಗಳ ಬಗ್ಗೆ, ಪರಾಮರ್ಶಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡುವಂತೆ ಸರ್ಕಾರದಿಂದ ಮಾನ್ಯ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ. ಸದರಿ ಸಮಿತಿಯು ದಿನಾಂಕ, 13.02.2025 ಮತ್ತು 09.05.2025ರಂದು ಸಭೆಗಳನ್ನು ನಡೆಸಿದ್ದು ಪ್ರಸ್ತುತ ಇಲ್ಲಿಯವರೆಗೆ ಶಿಫಾರಸ್ಸುಗಳನ್ನು ನೀಡಿರುವುದಿಲ್ಲ. ಸಮಿತಿಯ ವರದಿ ನಿರೀಕ್ಷಿಸಲಾಗಿದ್ದು, ಸಮಿತಿ ನೀಡುವ ಶಿಫಾರಸ್ಸುಗಳನ್ನು, ಸಚಿವ ಸಂಪುಟದ ಮುಂದೆ ಮಂಡಿಸಿ ವಿಶ್ವವಿದ್ಯಾಲಯಗಳು ಶೈಕ್ಷಣಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸದೃಢಗೊಳ್ಳಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.