ಶ್ರೀಮತಿ ಸುಮಾ ಮಹೇಶ್ ಗೌಡ – ಸಮಾಜ ಸೇವಕಿ ಮತ್ತು ಸಂಖ್ಯಾಶಾಸ್ತ್ರಜ್ಞೆ ಅವರು ಸಮಾಜ ಸೇವೆ ಹಾಗೂ ವಿದೇಶದಲ್ಲಿ ಭಾರತೀಯ ಸಮುದಾಯಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ Zee ಕನ್ನಡ ನ್ಯೂಸ್ ಕರ್ನಾಟಕ ಐಡಲ್ ಅವಾರ್ಡ್ 2025 ಗೌರವಕ್ಕೆ ಭಾಜನರಾಗಿದ್ದಾರೆ.

varthajala
0

 ಬೆಂಗಳೂರು, [17/09/2025] ಶ್ರೀಮತಿ ಸುಮಾ ಮಹೇಶ್ ಗೌಡ – ಸಮಾಜ ಸೇವಕಿ ಮತ್ತು ಸಂಖ್ಯಾಶಾಸ್ತ್ರಜ್ಞೆ ಅವರು ಸಮಾಜ ಸೇವೆ ಹಾಗೂ ವಿದೇಶದಲ್ಲಿ ಭಾರತೀಯ ಸಮುದಾಯಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ Zee ಕನ್ನಡ ನ್ಯೂಸ್ ಕರ್ನಾಟಕ ಐಡಲ್ ಅವಾರ್ಡ್ 2025 ಗೌರವಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರು ಹಲಸೂರಿನಲ್ಲಿ ಜನಿಸಿದ ಸುಮಾ ಮಹೇಶ್ ಗೌಡ ಅವರು ಸುಮಾರು 14 ವರ್ಷಗಳ ಕಾಲ ಕತಾರ್‌ನಲ್ಲಿ ವಾಸಿಸಿ, ಅನಿವಾಸಿ ಭಾರತೀಯರ ಧ್ವನಿಯಾಗಿ ಸೇವೆ ಸಲ್ಲಿಸಿದರು. ಖತಾರ್ ಕನ್ನಡ ಸಂಘದ ಮೂಲಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಅವರು ನಂತರ ಭಾರತೀಯ ರಾಯಭಾರ ಕಚೇರಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಇಂಡಿಯನ್ ಕಲ್ಚರಲ್ ಸೆಂಟರ್‌ನ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಇವರ ಕಾರ್ಯಭಾರದಿಂದ ಭಾರತೀಯ ಸಂಸ್ಕೃತಿ ವಿದೇಶಿಗರಿಗೆ ತಲುಪುವಲ್ಲಿ ಮಹತ್ವದ ಪಾತ್ರವಹಿಸಿದರು.

ಇತ್ತೀಚೆಗೆ ತಾಯ್ನಾಡಿಗೆ ಮರಳಿರುವ ಸುಮಾ ಮಹೇಶ್ ಗೌಡ ಅವರು ಸಮಾಜ ಸೇವೆಯ ಜೊತೆಗೆ ಸಂಖ್ಯಾಶಾಸ್ತ್ರದ ಮೂಲಕ ಅನೇಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪತಿಯ ಬೆಂಬಲದೊಂದಿಗೆ, ತಂದೆ ಓಲಿಂಪಿಯನ್ ಕೆಂಪಯ್ಯ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದಾರೆ.

ಅವರ ಸೇವೆ ಹಾಗೂ ಸಾಧನೆಗಳನ್ನು ಗೌರವಿಸುವ ನಿಟ್ಟಿನಲ್ಲಿ, Zee ಕನ್ನಡ ನ್ಯೂಸ್ ತಂಡವು ಕರ್ನಾಟಕ ಐಡಲ್ ಅವಾರ್ಡ್ 2025ನ್ನು ಪ್ರದಾನ ಮಾಡಿರುವುದು ಹೆಮ್ಮೆಯ ವಿಚಾರ.

Post a Comment

0Comments

Post a Comment (0)