ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ವಿಜಯಪುರ ಜಿಲ್ಲಾ ಘಟಕ ವಿಜಯಪುರ ಅಕ್ಟೋಬರ್ 24 /2025 ಶುಕ್ರವಾರ ಮಧ್ಯಾಹ್ನ 3 ಗಂಟೆ ವರಿಗೆ ವಿವಿಧ 26 ಸ್ಥಾನಗಳಿಗೆ ಒಟ್ಟು ಹದಿನೆಂಟು 18 ನಾಮಪತ್ರ ಸಲ್ಲಿಕೆಯಾಗಿದ್ದು ರಾಜ್ಯ ಕಾರ್ಯಕಾರಣಿ ಸ್ಥಾನಕ್ಕೆ ಎರಡು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಒಂದು ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಮೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಒಂದು ಖಜಾಂಚಿ ಸ್ಥಾನಕ್ಕೆ ಒಂದು ಕಾರ್ಯದರ್ಶಿ ಸ್ಥಾನಕ್ಕೆ ಎರಡು ಜಿಲ್ಲಾ ಕಾರ್ಯಕಾರಿಣಿ ಸ್ಥಾನಕ್ಕೆ ಎಂಟು ಒಟ್ಟು ಹದಿನೆಂಟು ನಾಮಪತ್ರ ಸಲ್ಲಿಸಿದ್ದಾರೆಂದು ವಿಜಯಪುರ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಅಕ್ಟೋಬರ್ 27 ಮಧ್ಯಾಹ್ನ 3 ಗಂಟೆ ವರಿಗೆ ಮಾತ್ರ ಕಾಲಾವಕಾಶ 28 ರಂದು ನಾಮಪತ್ರ ಪರಿಶೀಲನೆ 30/10/2025 ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶ ಇದೆ ನವೆಂಬರ್ 9 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆ ವರಿಗೆ ಮತದಾನ ಅಂದೆ ಮಧ್ಯಾಹ್ನ 3/30 ಗಂಟೆಗೆ ಮಾತ ಎಣಿಕೆ ಕಾರ್ಯ ನಡೆಯಲಿದೆ ಎಂದು ಹಿರಿಯ ಪತ್ರಿಕೋದ್ಯಮಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ತಿಳಿಸಿದ್ದಾರೆ.

-min.png)