ಅಂಧ, ವಿಕಲಚೇತನ 5 ಜೋಡಿಗಳು ಉಚಿತ ಸಾಮೂಹಿಕ ವಿವಾಹ: ಅರ್ಪಿತಾ ಸೇವಾ ಟ್ರಸ್ಟ್

varthajala
0

*500ಅಂಧರಿಂದ ನೇತ್ರದಾನ ಮಹತ್ವ ಕುರಿತು ವಾಕ್ ಥಾನ್*

*ಕಿವಿ ಕೆಟ್ಟದ್ದು ಹೇಳುತ್ತದೆ, ಕಣ್ಣು ಕೆಟ್ಟದ್ದು ಹೆಚ್ಚು ನೋಡುತ್ತದೆ, ದೃಷಿ ಇಲ್ಲದಿದ್ದರು  ಮನಸ್ಸಿನಿಂದ ವಿಶ್ವವನ್ನೆ ನೋಡುತ್ತಾರೆ ಅಂಧರು-ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ* 

ಬೆಂಗಳೂರು:ಮಂಜುಶ್ರೀ ಕಲ್ಯಾಣ ಮಂಟಪದಲ್ಲಿ ಅರ್ಪಿತ ಸೇವಾ ಟ್ರಸ್ಟ್ ಲಗ್ಗೆರೆ ವತಿಯಿಂದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ 5 ಅಂಧ ಹಾಗೂ ವಿಕಲಚೇತನ ಜೋಡಿಗಳ ವಿವಾಹ ಸಮಾರಂಭ ಮತ್ತು ಅಂತರಾಷ್ಟ್ರೀಯ ಬಿಳಿ ಕೋಲು ದಿನಾಚರಣೆ ಕಾರ್ಯಕ್ರಮ.

ದಿವ್ಯ ಸಾನಿಧ್ಯ ಜಗದ್ಗುರು  ಶ್ರೀ ಬಸವಮೂರ್ತಿ ಶಿವಶರಣ ಮಾದಾರ ಚನ್ನಯ್ಯ ಮಹಾಸ್ವಾಮಿಗಳು, ಜಗದ್ಗುರು ಶಿವಬಸವ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಮಡಿವಾಳ ಮಾಚಿದೇವ ಮಹಾಸ್ವಾಮಿಗಳು ಹಾಗೂ  ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹನುಮಂತರಾಯಪ್ಪ,  ಬಿಬಿಎಂಪಿ ಮಾಜಿ ಸದಸ್ಯರಗಳಾದ  ಬಿ.ಆರ್.ನಂಜುಂಡಪ್ಪ, ಅರ್ಪಿತಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಲಗ್ಗೆರೆ ನಾರಾಯಣಸ್ವಾಮಿರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯರುಗಳಾದ ಶ್ರೀಮತಿ ಮಂಜುಳನಾರಾಯಣಸ್ವಾಮಿರವರು, ಸಿದ್ದೇಗೌಡರು, ವೇಲು ನಾಯ್ಕರ್ ,ಶ್ರೀಮತಿ ಆಶಾ ಸುರೇಶ್, ಶ್ರೀಮತಿ ರೂಪಲಿಂಂಗೇಶ್ವರ್, ಮೋಹನ್ ಕುಮಾರ್ ರವರು, ಕಾರ್ಮಿಕ ವಿಭಾಗ ಅಧ್ಯಕ್ಷ ಪುಟ್ಟಸ್ವಾಮಿಗೌಡರವರು  ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ  ನೂತನ ವಧು-ವರನಿಗೆ ಶುಭ ಕೋರಿ, ಆಶೀರ್ವಾದ ಮಾಡಿದರು.

*ಶಿವಬಸವ ಮಾದರ ಚನ್ನಯ್ಯ ಮಹಾಸ್ವಾಮಿಗಳು* ಮಾತನಾಡಿ ಸಡಗರ,ಸಂಭ್ರಮ ಸಾಮಾಜಿಕ ಜೀವನದಲ್ಲಿ ಅರ್ಥಪೂರ್ಣವಾಗಿದೆ. 

ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಇದೆ. ಎಲ್ಲ ಪ್ರಾಣಿಗಳಿಗಿಂತ ಬುದ್ದಿವಂತರು ಮನುಷ್ಯರು.

ಬದುಕು ಕಟ್ಟಿಕೊಳ್ಳಲು ಮತ್ತು ಇತರಂತೆ ಬಾಳಿ ಬದುಕಲು ಇವರಿಗೂ ಅವಕಾಶ ಸಿಕ್ಕಿದೆ.

ದಾನ, ಧರ್ಮ ಮಾಡಬಹುದು ಸೇವಾ ಮನೋಭಾವನೆ ಮುಂದೆ ಬಂದಾಗ ಸಮಾಜಗ ಅಭಿವೃದ್ದಿ ಸಾಧ್ಯ.

ಕಿವಿ ಕೆಟ್ಟದನ್ನು ಹೆಚ್ಚು ಕೇಳುತ್ತದೆ, ಕಣ್ಣು ಕೆಟ್ಟದನ್ನ ಹೆಚ್ಚು ನೋಡುತ್ತದೆ ಹೆಚ್ಚು ಕಣ್ಣು, ಕಿವಿ ಇಲ್ಲದರು ಕೇಳಿಸದೇ, ಕಣ್ಣಿಸದೇ ಇರಬಹುದು ಅದರೆ ಅಂಧರು ಇಡಿ ವಿಶ್ವವನ್ನೆ ಮನಸ್ಸಿನಿಂದ ನೋಡುತ್ತಾರೆ. ಇವರ ಸೇವೆ ನಾವು ಮಾಡಿದರೆ ದೇವರ ಸೇವೆ ಮಾಡಿದಂತೆ.

ಶ್ರೀಮಂತರು ಎಲ್ಲರು ದಾನವಂತರಲ್ಲ, ಹೃದಯ ಶ್ರೀಮಂತರು ಮಾತ್ರ ನಿಜವಾದ ಶ್ರೀಮಂತರು ಎಂದು ಹೇಳಿದರು.

*ಹನುಮಂತರಾಯಪ್ಪ* ರವರು ಮಾತನಾಡಿ ಅಂಧ, ವಿಕಲಚೇತನರು ವಿವಾಹ ಮಹೋತ್ಸವದಲ್ಲಿ ಭಾಗಿಯಾಗಿರುವ ಸಂತೋಷದ ಕ್ಷಣಗಳು. ಸಮಾಜದಲ್ಲಿ ನೊಂದ, ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು, ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು.

ಎಲ್ಲ ಸರಿ ಇದ್ದವರು ಏನು ಮಾಡುವುದಿಲ್ಲ, ದೇಹದಲ್ಲಿ ನ್ಯೂನತೆ ಇದ್ದರು ಸಾಧನೆ ಮಾಡಿ ತೋರಿಸುತ್ತಾರೆ. ಕೆಲವು ರಾಜಕಾಜಕಾರಣಿಗಳು ಹಣ,  ಅಧಿಕಾರ, ದರ್ಪದಿಂದ ಬೀಗುತ್ತಾರೆ.

ಇದೆಲ್ಲ ಶಾಶ್ವತ ಅಲ್ಲ, ನಾವು ಮಾಡುವ ಪುಣ್ಯದ ಕೆಲಸ ಮಾತ್ರ ಶಾಶ್ವತ ಎಂದು ಹೇಳಿದರು.

*ಲಗ್ಗೆರೆ ನಾರಾಯಣಸ್ವಾಮಿರವರು* ಮಾತನಾಡಿ ಹುಟ್ಟು ಉಚಿತ ಸಾವು ಖಚಿತ ಜೀವನದ ಹಾದಿಯಲ್ಲಿ ನಾವು ಮಾಡುವ ಉತ್ತಮ ಕಾರ್ಯಗಳು ಶಾಶ್ವತವಾಗಿ ನಿಲ್ಲುತ್ತದೆ.

ಕಣ್ಣು ಇಲ್ಲದೇ ಹೋದರೆ ಇಡಿ ಜೀವನವೆ ಕತ್ತಲು ಅವರಿಸುತ್ತದೆ. ಮರಣ ನಂತರ ಕಣ್ಣು ದಾನ ಮಾಡಿದರೆ ಇನ್ನೂಬ್ಬರಿಗೆ ಜೀವ ಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.

ಸ್ಥಳೀಯ ಮುಖಂಡರುಗಳಾದ ಗಿರೀಶ್ ಗೌಡರವರು ಭೂಷಣ್‌  ಮಂಜುನಾಥ್ ಬಾಬುರವರು  ಲಕ್ಕವಳ್ಳಿ ಉಮಾಶಂಕರ್‌, ಅಂದಾನಪ್ಪ, ಮುನಿಗಂಗಪ್ಪರವರು 

ಪುಟ್ಟಸ್ವಾಮಿ ಗೌಡ್ರು ವೈದ್ಯನಾಥ್‌,ಎನ್. ರವಿಶಂಕರ್‌ ಅಮರನಾಥ್‌.ಶ್ರೀಮತಿ ವನಿತಾ.ಎಸ್, ಪಿ. ವೇಲುರವರು ಎಸ್.ಪಿ. ಆಂಜನಪ್ಪ,ಶ್ರೀಮತಿ ಮಹಾಲಕ್ಷ್ಮಿರವರು ಪಾಲ್ಗೊಂಡಿದ್ದರು.

ಅಂತರಾಷ್ಟ್ರೀಯ ಬಿಳಿಕೋಲು ದಿನಾಚರಣೆ ಅಂಗವಾಗಿ 500ಕ್ಕೂ ಅಂಧರು ಸುಮಾರು 3ಕಿಲೋ ಮೀಟರ್ ವರಗೆ ವಾಕ್ ಥಾನ್ ಮಾಡಿದರು.

Post a Comment

0Comments

Post a Comment (0)