ಬೆಂಗಳೂರು - ಮಕ್ಕಳಲ್ಲಿ ಪಟಾಕಿ ಸುರಕ್ಷತೆಯ ಕುರಿತು ಅರಿವು ಮೂಡಿಸುವ ನಿರಂತರ ಅಭಿಯಾನದ ಭಾಗವಾಗಿ, ನಾರಾಯಣ ನೇತ್ರಾಲಯ ಕಣ್ಣಿನ ಆಸ್ಪತ್ರೆಯು ತನ್ನ ಇಂದಿರಾನಗರ ಶಾಖೆಯಲ್ಲಿ 19, ಅಕ್ಟೋಬರ್ 2025 ರಂದು “ಅರೆಲಿ ದೀಪಾವಳಿ ಕಲಾ ಸ್ಪರ್ಧೆ”ಯನ್ನು ಆಯೋಜಿಸಿತ್ತು.ಈ ಸ್ಪರ್ಧೆಯಲ್ಲಿ ದೀಪಕ್ಕೆ ಬಣ್ಣ ಹಾಕುವುದು, ಕಾಗದದ ತೋರಣ ಮಾಡುವುದು ಮತ್ತು ಲ್ಯಾಂಟರ್ನ್ ತಯಾರಿಕೆಯನ್ನು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆ- ಮೂರು ವಿಭಾಗಗಳಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮವು, ಬೆಂಗಳೂರಿನ 23ಕ್ಕೂ ಹೆಚ್ಚು ಶಾಲೆಗಳ 75ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಕಂಡಿತು.
ನಾರಾಯಣ ನೇತ್ರಾಲಯದ ನಿರ್ದೇಶಕರಾದ ಶ್ರೀಮತಿ ನೈನಾ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸ್ಪರ್ಧೆಯ ತೀರ್ಪುಗಾರರಾಗಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅವರು ಪಟಾಕಿಗಳ ಅಪಾಯಗಳ ಬಗ್ಗೆ, ವಿಶೇಷವಾಗಿ ಕಣ್ಣಿನಂತಹ ಸೂಕ್ಷ್ಮ ಅಂಗಗಳಿಗೆ ಅವುಗಳಿಂದಾಗುವ ಅಪಾಯಗಳ ಕುರಿತು ಮಾತನಾಡಿದರು. ಸುರಕ್ಷಿತ ದೀಪಾವಳಿಯನ್ನು ಆಚರಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ಅವರೊಂದಿಗೆ ನಾರಾಯಣ ನೇತ್ರಾಲಯದ ವೈದ್ಯರಾದ ಡಾ. ಸಂಕೇತ್ ಭಟ್ನಾಗರ್ ಮತ್ತು ಡಾ.ಬಿಂದು ರುದ್ರಮೂರ್ತಿ ಇವರುಗಳು, ಎಲ್ಲಾ ಯುವ ಸ್ಪರ್ಧಿಗಳು ಪ್ರದರ್ಶಿಸಿದ ಸೃಜನಶೀಲತೆ, ಉತ್ಸಾಹ ಮತ್ತು ಪ್ರತಿಭೆಯನ್ನು ಮೆಚ್ಚಿ ಅವರಿಗೆ ಪ್ರೋತ್ಸಾಹ ನೀಡಿದರು.ಈ ಕಾರ್ಯಕ್ರಮದ ಭಾಗವಾಗಿ, ಹಬ್ಬದ ಸಮಯದಲ್ಲಿ ಕಣ್ಣುಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಸುರಕ್ಷತಾ ಕನ್ನಡಕಗಳನ್ನು (safety glasses) ಎಲ್ಲಾ ಸ್ಪರ್ಧಿಗಳಿಗೆ ವಿತರಿಸಲಾಯಿತು. ಮಕ್ಕಳು ನಮ್ಮ ರಾಜ್ಯದ ಶ್ರೀಮಂತ ಸಂಸ್ಕೃತಿಯ ಭಾಗವಾಗಿರುವ “ಹುಲಿ ಕುಣಿತ”ವನ್ನೂ ಸಹ ವೀಕ್ಷಿಸಿದರು.
ದೀಪಾವಳಿಯ ಸಮಯದಲ್ಲಿ ತುರ್ತು ಸೇವೆ ಒದಗಿಸಲು, ನಾರಾಯಣ ನೇತ್ರಾಲಯವು ತನ್ನ ರಾಜಾಜಿನಗರ, ಬೊಮ್ಮಸಂದ್ರ, ಇಂದಿರಾನಗರ ಮತ್ತು ಬನ್ನೇರುಘಟ್ಟ ರಸ್ತೆ ಶಾಖೆಗಳನ್ನು ಅಕ್ಟೋಬರ್ 19 ರಿಂದ 22, 2025ರವರೆಗೆ ತುರ್ತು ಸೇವೆಗಳಿಗಾಗಿ 24/7 ತೆರೆದಿಡಲಿದೆ.ವೈಟ್‌ಫೀಲ್ಡ್ ಶಾಖೆಯು ಈ ಅವಧಿಯಲ್ಲಿ ಬೆಳಗ್ಗೆ 9:00 ರಿಂದ ಸಂಜೆ 6:00 ರವರೆಗೆ ತೆರೆದಿರುತ್ತದೆ. 📞 ತುರ್ತು ಸೇವೆ ಫೋನ್ ನಂಬರ್ ಗಳು ಇಲ್ಲಿವೆ:
ರಾಜಾಜಿನಗರ: 9902546046
ಬೊಮ್ಮಸಂದ್ರ: 9902821128
ಇಂದಿರಾನಗರ: 9916024455
ಬನ್ನೇರುಘಟ್ಟ ರಸ್ತೆ: 9035154168 / 9035154170
ವೈಟ್‌ಫೀಲ್ಡ್: 9535258004