"ಶಿಕ್ಷಕರ ದಿನಾಚರಣೆ ಪ್ರಶಸ್ತಿ ಪ್ರಧಾನ ಸಮಾರಂಭ"

varthajala
0

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ (ರೀ) ಸಂಸ್ಥೆ ವತಿಯಿಂದ ಸಂಸ್ಥಾಪಕಿ ಅಂಬಿಕಾ ಸಿ ಮತ್ತು ಸಂಸ್ಥೆಯವರು ಶಿಕ್ಷಕರ ದಿನಾಚರಣೆ ಅಂಗವಾಗಿ, ವಿವಿಧ ಪಠ್ಯೇತರ ಶಿಕ್ಷಣ  ಕ್ಷೇತ್ರದಲ್ಲಿ ಸಾಧನೆಗೈದ  ಶಿಕ್ಷಕರುಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರಶಸ್ತಿ ಪ್ರಧಾನ  ಕಾರ್ಯಕ್ರಮವನ್ನು ದಿನಾಂಕ 26 ಅಕ್ಟೋಬರ್ 2025 ರ ಭಾನುವಾರದಂದು, ಬೆಂಗಳೂರಿನ, ಎಂಜಿ ರಸ್ತೆ, ಮೆಟ್ರೋ ಸ್ಟೇಷನ್  ಆವರಣದಲ್ಲಿರುವ "ರಂಗಸ್ಥಳ"  ಸಭಾಂಗಣದಲ್ಲಿ  ಆಯೋಜಿಸಿದ್ದರು . 








 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಮಾಜಿ ಮೇಯರ್  ಮತ್ತು ಪ್ರಸ್ತುತ  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ  ನಿಗಮದ ಅಧ್ಯಕ್ಷೆ ಶ್ರೀಮತಿ  ಜಿ. ಪದ್ಮಾವತಿ , ಶಿವಕುಮಾರ್ ಬೆಳ್ಳಿತಟ್ಟೆ, ಹಿರಿಯ ಪತ್ರಕರ್ತರು ಮತ್ತು  ಸುದ್ದಿ ಸಂಪಾದಕರು,

 ಕೆ ಟಿ ಚಂದ್ರು ವಿಶ್ವ ಒಕ್ಕಲಿಗ ಸಂಘದ ಡೈರೆಕ್ಟರಿ ಸಂಪಾದಕರು, ಖ್ಯಾತ ಇತಿಹಾಸ ತಜ್ಞ ತಲಕಾಡು ಚಿಕ್ಕ ರಂಗೇಗೌಡ, ರವರುಗಳು ಉಪಸ್ಥಿತರಿದ್ದು, ಯೋಗ, ಕಲೆ, ಸಂಸ್ಕೃತಿ, ಸಾಮಾಜಿಕ ಶಿಸ್ತು ಮತ್ತು ಪಠ್ಯೇತರ ಇತ್ಯಾದಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಹಾಗೂ ವಿಶ್ವ ದಾಖಲೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೂ ಗೌರವ  ಸಲ್ಲಿಸಿದರು .  

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ  ಭರತನಾಟ್ಯ ಶಿಕ್ಷಕಿ ಸುಬ್ಬಲಕ್ಷ್ಮಿ ಶೇಖರ್,   ಸಿ ಸ್ಕೌಟ್ಸ್ ಅಂಡ್ ಗೈಡ್ಸ್ ಇಂಡಿಯಾದ ಮಿಡ್ ಶಿಪ್ ಮೆನ್ ಗೀತಾ ಚಂದ್ರಶೇಖರ್, ಶಾಲಾ ಶಿಕ್ಷಕಿ ಹಾಗೂ ಸೀಸ್ಕೋಟಿಂಗ್  ಪೆಟ್ಟಿ ಆಫೀಸರ್ ಚಾಮುಂಡೇಶ್ವರಿ ಕೆ,  ಪ್ರಾಂಶುಪಾಲರು ಹಾಗೂ ಕಾಲೇಜು ನಿರ್ದೇಶಕಿ - ಡಾ.ಸಾಯಿದ ರೂಬಿನ ಕೌಸರ್, ಸೀ ಸ್ಕೌಟಿಂಗ್ ಪೆಟ್ಟಿ ಆಫೀಸರ್, ಕಮ್ಯುನಿಕೇಶನ್ ಸಾಫ್ಟ್ ಸ್ಕಿಲ್ ಟ್ರೇನರ್ -   ಕೃಪಾ ಡಿ ಷಾ,  ಅಂತರಾಷ್ಟ್ರೀಯ ಶಾಲಾ ಆಡಳಿತ ವರ್ಗದ ಸಂಯೋಜಕೀ - ಶಮ ತಾಜ್, ಯೋಗ ಶಿಕ್ಷಕಿ - ಸುಮಿತ್ರ  ಸಿ, ಭರತನಾಟ್ಯ ಶಿಕ್ಷಕಿ ಲಕ್ಷ್ಮಿ ಶ್ರೀ, ಯೋಗ ಗಾಂಧಾರಿ ವಿದ್ಯೆ ಶಿಕ್ಷಕಿ ರೂಪಶ್ರೀ ಎನ್ ಆರ್  ಮತ್ತು ಶಿಕ್ಷಕ ಹಾಗೂ ಸಮಾಜಸೇವಕ ಭರತ್ ಕುಮಾರ್ ಜಿ ರವರುಗಳಿಗೆ ಪ್ರಶಸ್ತಿ ನೀಡಿ  ಸನ್ಮಾನಿಸಲಾಯಿತು.

 ವಿಶೇಷವಾಗಿ ಈ ಸಂದರ್ಭದಲ್ಲಿ ವಿಶ್ವ ದಾಖಲೆಯಲ್ಲಿ ಪಾಲ್ಗೊಂಡ ನೀರಜ್ ಆರ್ ಆರ್, ಪ್ರಣೀತ್ ಎಸ್ ಡಿ,ರಾಹುಲ್ ಎಸ್,ಸಿಂಚನ ಬಿ ಎ, ಸ್ಕಂದ ವಿನಿತ್  ಬಿ ಎ, ಮನ್ವಿತ  ವಿ, ಮಹತಿ ಎಸ್ ಸ್ವಾಮಿ, ಮಹಿತ್ ಎಸ್ ಸ್ವಾಮಿ, ಹಿತೇಶ್ ವೈ ಎಂ, ಪರೀಕ್ಷಿತ್ ಎ ಎಚ್, ಶಂಕರಿ ಆರ್, ದುರ್ಗಾಪ್ರಸಾದ್ ಆರ್, ಋತ್ವಿಜ್ ಎಸ್,  ಶ್ರದ್ಧಾ ತಾರಕ್ ಪಿ, ಸಚ್ಚಿತ್ ತಾರಕ್ ಪಿ, ಲೋಹಿತ  ಎಸ್  ಮತ್ತು ಗ್ರೀಷ್ಮ ಎಸ್  ರವರುಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮ ಯಶಸ್ವಿಯಾಗುವಲ್ಲಿ   ಕರ್ನಾಟಕ,  ಶ್ರೀಮತಿ ಪ್ರವೀಣ -  ಲಿಟಲ್ ಎಲ್ಲಿ ಸಂಸ್ಥೆಯ ಆಡಳಿತ ವರ್ಗದ  ಮುಖ್ಯಸ್ಥ , ಕುಮಾರಿ ಧನುಶ್ರೀ - ನಿರೂಪಕಿ ಮತ್ತು ನೃತ್ಯ ಶಿಕ್ಷಕಿ, ರವರುಗಳಿಗೂ ಸನ್ಮಾನಿಸಲಾಯಿತು. ವಿಶೇಷವಾಗಿ  ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ವಿಶ್ವ ದಾಖಲೆ  ಮಾಡಿದ ಮಕ್ಕಳ ಯೋಗ, ಗಾಂಧಾರಿ ವಿದ್ಯೆ ಪ್ರದರ್ಶನ, ಸಂಗೀತ - ನೃತ್ಯೋತ್ಸವ ನೋಡುಗರ ಕಣ್ಮನ ಸೆಳೆಯಿತು.  ಗುರು ಹಿರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ಸುಗಮವಾಗಿ ಜರುಗಿತ್ತು.

Post a Comment

0Comments

Post a Comment (0)