ಬೆಂಗಳೂರು, ಅಕ್ಟೋಬರ್ 27 (ಕರ್ನಾಟಕ ವಾರ್ತೆ): ಪೀಣ್ಯದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‍ಒ), ಪ್ರಾದೇಶಿಕ ಕಚೇರಿ, ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್‍ನ ಸಹಯೋಗದೊಂದಿಗೆ, ಇತ್ತೀಚೆಗೆ ನಡೆದ ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್‍ಗಾರ್ ಯೋಜನೆ (ಪಿಎಂವಿಬಿಆರ್‍ವೈ) ಕುರಿತು ಜಾಗೃತಿ ಮತ್ತು ಸಂವಾದಾತ್ಮಕ ಅಧಿವೇಶನವು ಯಶಸ್ವಿಯಾಗಿ ಜರುಗಿತು.
ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿ ಮಾತನಾಡುತ್ತಾ, ಭಾರತದ ಕಾರ್ಯಪಡೆಯನ್ನು ಬಲಪಡಿಸುವಲ್ಲಿ ಮತ್ತು ಕೈಗಾರಿಕೆಗಳು ತಮ್ಮ ಮಾನವ ಸಂಪನ್ಮೂಲ ನೆಲೆಯನ್ನು ವಿಸ್ತರಿಸಲು ಅನುವು ಮಾಡಿಕೊಡುವಲ್ಲಿ ಪಿಎಂವಿಬಿಆರ್‍ವೈಯ ಮಹತ್ವವನ್ನು ತಿಳಿಸಿದರು.
ಭಾರತ ಸರ್ಕಾರವು ಪ್ರಾರಂಭಿಸಿರುವ ಈ ಕಾರ್ಯಕ್ರಮ ಪಿಎಂವಿಬಿಆರ್‍ವೈ ಯೋಜನೆಯ ಪ್ರಯೋಜನಗಳು ಮತ್ತು ನಿಬಂಧನೆಗಳ ಬಗ್ಗೆ ಉದ್ಯೋಗದಾತರಲ್ಲಿ ಜಾಗೃತಿ ಮೂಡಿಸುವುದು ಮತ್ತು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಉದ್ಯೋಗಿಗಳಿಗೆ ಆರ್ಥಿಕ ಪೆÇ್ರೀತ್ಸಾಹವನ್ನು ನೀಡುವ ಮೂಲಕ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ಇಪಿಎಫ್‍ಒ ಮೂಲಕ ಕಾರ್ಯಗತಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಯೋಜನೆಯು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಮತ್ತು ಉದ್ಯೋಗದ ಔಪಚಾರಿಕೀಕರಣವನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ, ವಿಶೇಷವಾಗಿ ಉತ್ಪಾದನಾ ವಲಯದಲ್ಲಿ ಪಿಎಂವಿಬಿಆರ್‍ವೈ ಯೋಜನೆಯು ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ:
ತಿಂಗಳಿಗೆ ರೂ. 1,00,000 ವರೆಗೆ ಗಳಿಸುವ ಮತ್ತು ಇಪಿಐ ಅಡಿಯಲ್ಲಿ ದಾಖಲಾದ ಮೊದಲ ಬಾರಿಗೆ ಉದ್ಯೋಗಿಗಳು ರೂ. 15,000 ವರೆಗಿನ ಪ್ರೋತ್ಸಾಹ ಧನಕ್ಕೆ ಅರ್ಹರಾಗಿರುತ್ತಾರೆ.
ಸರ್ಕಾರವು ಪ್ರತಿ ಉದ್ಯೋಗಿಗೆ ತಿಂಗಳಿಗೆ ರೂ. 3,000 ವರೆಗೆ ಪ್ರೋತ್ಸಾಹ ಧನವನ್ನು ಎರಡು ವರ್ಷಗಳವರೆಗೆ ನೀಡುತ್ತದೆ, ಆದರೆ ಉದ್ಯೋಗಿ ಕನಿಷ್ಠ ಆರು ತಿಂಗಳು ನಿರಂತರವಾಗಿ ಉದ್ಯೋಗದಲ್ಲಿದ್ದರೆ ಉತ್ಪಾದನಾ ವಲಯದ ಸಂಸ್ಥೆಗಳಿಗೆ, ಈ ಪ್ರಯೋಜನವನ್ನು ಹೆಚ್ಚುವರಿಯಾಗಿ ಎರಡು ವರ್ಷಗಳವರೆಗೆ ವಿಸ್ತರಿಸಬಹುದು.
ಬೆಂಗಳೂರಿನ ಇಪಿಎಫ್‍ಒ ಕಚೇರಿಗಳ ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂವಾದಾತ್ಮಕ ಅಧಿವೇಶನವು ಉದ್ಯೋಗದಾತರು ಇಪಿಎಫ್‍ಒ ಕಚೇರಿಗಳೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಮತ್ತು ಯೋಜನೆಯ ಕಾರ್ಯಾಚರಣೆಯ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಈ ಕಾರ್ಯಕ್ರಮವು ಅವಕಾಶವನ್ನು ಒದಗಿಸಿತು.