ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಾಮಫಲಕಗಳಲ್ಲಿ ಕನ್ನಡಕ್ಕೆ ಆಧ್ಯತೆ ಅನ್ವಯಿಸುವುದಿಲ್ಲವೇ!

varthajala
0

ರಾಜ್ಯ ಸರ್ಕಾರದ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಕಾಯ್ದೆ, ೨೦೨೪’ ರನ್ವಯ ನಾಮಫಲಕಗಳ ಮೇಲ್ಭಾಗದಲ್ಲಿ ಶೇ.೬೦ರಷ್ಟು ಕನ್ನಡ ಬಳಕೆ ಕಡ್ಡಾಯ.  ಈ ಕಾಯ್ದೆಯಿಂದ ಖಾಸಗೀ ನಾಮಫಲಕಗಳಲ್ಲಿ ಕನ್ನಡ ಕಾಣಿಸುತ್ತಿದೆ. ಆದರೆ, ಸರ್ಕಾರದ ಭಾಗವಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ  ಇತೀಚೆಗೆ ಬಿಟಿಎಂ ಲೇ-ಔಟ್‌ನಲ್ಲಿ ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣ ಉದ್ಘ್ಘಾಟಿಸಿದ್ದು ಅದರ ನಾಮಫಲಕ ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯಲ್ಲಿಯೇ ಇದೆ. ಒಂದಕ್ಷರವೂ ಕನ್ನಡದಲ್ಲಿಲ್ಲ. ಇನ್ನು ದೊಡ್ಡ ಲೋಪವೆಂದರೆ ಕರ್ನಾಟಕದ ಸಾರಿಗೆ ಸಚಿವರ ಚಿತ್ರವಿದ್ದು ಅವರ ಹೆಸರೂ ಇಂಗ್ಲಿಷ್‌ನಲ್ಲ್ಲಿದೆ. ಇದನ್ನು ಪ್ರಶ್ನಿಸದ ಸಚಿವರ ಧೋರಣೆ ಖಂಡನೀಯ. ಈ ಆದೇಶದ ಜೊತೆಗೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ೨೪-೮-೨೦೨೪ರಂದು ಸುತ್ತೋಲೆ ಹೊರಡಿಸಿ ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು  ಎಂದು ಸೂಚಿಸಿದ್ದಾರೆ.   ಸರ್ಕಾರದ ನೀತಿ, ಆದೇಶವನ್ನು ಉಲ್ಲಂಘಸಿರುವ ಅಧಿಕಾರಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಕನ್ನಡ ಗೆಳೆೆಯರ ಬಳಗ ಒತ್ತಾಯಿಸುತ್ತದೆ. 

ಜಿ.ಬಿ.ಎ. ಆಡಳಿತ ಭಾಷೆ ಯಾವುದು!

 ರಾಜ್ಯ ಸರ್ಕಾರ ಬಂಡವಾಳ ಹೂಡಿಕೆ ಸಮಾವೇಶದ ಸಂದರ್ಭದಲ್ಲಿ ಬೆಂಗಳೂರನ್ನು ಬಹುಭಾಷಿಕ ನಗರ (ಕಾಸ್ಮಪಾಲಿಟಿನ್) ಎಂದು ಜಾಹಿತಾತಿನಲ್ಲಿ ನೀಡಿತ್ತು. ಇತ್ತೀಚೆಗೆ ಸರ್ಕಾರ ರಚಿಸಿದರುವ ‘ಗ್ರೇಟರ್ ಬೆಂಗಳೂರು ಅಥಾರಿಟಿ’ಯ ಭಿತ್ತಿ ಪತ್ರಗಳು ಇಂಗ್ಲಿಷ್‌ನಲ್ಲಿತ್ತು. ಈಗ ಸರ್ಕಾರ ನಡೆಸುತ್ತಿರುವ ‘ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ’ ಸಂಬAಧ ಜಿಬಿಎ ಮುಖ್ಯ ಆಯುಕ್ತರು ಕಳುಹಿಸುತ್ತಿರುವ ವಾಟ್ಸ್ಅಪ್ ಸಂದೇಶಗಳು ಇಂಗ್ಲಿಷ್‌ನಲ್ಲಿಯೇ ಇವೆ. ಬೆಂಗಳೂರು ಆಡಳಿತ ಕನ್ನಡವನ್ನು ಕಡೆಗಣಿಸಿ ಇಂಗ್ಲಿಷ್ ಬಳಸುತ್ತಿರುವುದನ್ನು ನೋಡಿದಾಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಡಳಿತಭಾಷೆ ಯಾವುದು? ಎಂಬ ಅನುಮಾನ ಮೂಡುತ್ತದೆ. ಈ ವಿಚಾರವನ್ನು ರಾಜ್ಯ ಮುಖ್ಯ ಕಾರ್ಯದರ್ಶಿಗಳು ಗಂಭೀರವಾಗಿ ಪರಿಗಣಿಸಿ ಸಂಬAಧಸಿದ ಅಧಿಕಾರಗಳ ಮೇಲೆ ಸಿಸ್ತು ಕ್ರಮ ಜರುಗಿಸಬೇಕೆಂದು ಕನ್ನಡ ಗೆಳೆಯರ ಬಳಗ ಆಗ್ರಹಿಸುತ್ತದೆ.


Post a Comment

0Comments

Post a Comment (0)