ಬೆಂಗಳೂರು, ನವೆಂಬರ್ 05 (ಕರ್ನಾಟಕ ವಾರ್ತೆ): ನವದೆಹಲಿಯಲ್ಲಿಂದು ಕೇಂದ್ರ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣ ಅವರು ಸೌಹಾಧರ್ಯುತವಾಗಿ ಭೇಟಿ ಮಾಡಿದರು.
ಇದೇ ವೇಳೆ ಜಿಎಸ್‍ಟಿ ಬೆಲೆ ಇಳಿಕೆಯ ಮಹತ್ವದ ನಿರ್ಧಾರ ಕೈಗೊಂಡು ದೇಶದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಕಳೆದ ಸೆಪ್ಟೆಂಬರ್ 22 ರಿಂದಲೇ ಜಿಎಸ್‍ಟಿ ಬೆಲೆ ಇಳಿಕೆಯ ನಿರ್ಧಾರ ಜಾರಿಗೆ ಬಂದಿದ್ದು, ಶೇ.90 ರಷ್ಟು ಸಾಮಗ್ರಿಗಳ ಬೆಲೆ ಇಳಿಕೆಯಾಗಿದೆ. ಇದು ದೇಶದ ಬಡವರು ಹಾಗೂ ಮಧ್ಯಮ ವರ್ಗದವರ ಜೀವನ ಮಟ್ಟದ ಹೆಚ್ಚಳದ ಜೊತೆಗೆ ಉಳಿತಾಯಕ್ಕೂ ಕಾರಣವಾಗಿದೆ. ಅಲ್ಲದೆ ದೇಶದ ಆರ್ಥಿಕ ಪ್ರಗತಿಗೂ ಶಕ್ತಿ ನೀಡಿದೆ. ತುಮಕೂರಿನ ವಿವಿಧ ಭಾಗಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಜನತೆ ಜಿಎಸ್‍ಟಿ ಬೆಲೆ ಇಳಿಕೆ ನಿರ್ಧಾರದ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದರು ಎಂದು ತಿಳಿಸಿದರು.