ಉದ್ಘಾಟನೆ : ನಾಡೋಜ ಪ್ರೊ|| ಬರಗೂರು ರಾಮಚಂದ್ರಪ್ಪ
ಬೆಂಗಳೂರು :
ಕನ್ನಡ ಮತ್ತು ಸಂಸ್ಕೃತಿ ಇಲಾಖೆ-ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ನವೆಂಬರ್ 3, ಸೋಮವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ "ಸಾಂಸ್ಕೃತಿಕ ಸಮಾವೇಶ"ವನ್ನು ಹಮ್ಮಿಕೊಳ್ಳಲಾಗಿದೆ.
ಸಭಾ ಕಾರ್ಯಕ್ರಮವನ್ನು ಸಾಂಸ್ಕೃತಿಕ ಚಿಂತಕರಾದ ನಾಡೋಜ ಪ್ರೊ|| ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ವಿದುಷಿ ಶುಭ ಧನಂಜಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಚಲನಚಿತ್ರ ನಟರಾದ 'ಕರ್ನಾಟಕ ಕಲಾಶ್ರೀ' ಡಾ. ಶ್ರೀಧರ್ ರವರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಬಲವಂತರಾವ್ ಪಾಟೀಲ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಾನಪದ ವಿದ್ವಾಂಸರು ಮತ್ತು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಜೋಗಿಲ ಸಿದ್ದರಾಜುರವರು ಅಕಾಡೆಮಿ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳ ಬಾಂಧವ್ಯ, ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ಇರುವ ಯೋಜನೆಗಳ ಬಗ್ಗೆ ಈ ಸಮಾವೇಶದಲ್ಲಿ ತಿಳಿಸಿಕೊಡಲಿದ್ದಾರೆ. ಸ್ವಾಗತ : ವಿದುಷಿ ಉಷಾ ಬಸಪ್ಪ (ಸದಸ್ಯರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ), ಪ್ರಾಸ್ತಾವಿಕ ನುಡಿ : ಶ್ರೀ ಎನ್. ನರೇಂದ್ರ ಬಾಬು (ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ), ನಿರೂಪಣೆ : ಶ್ರೀ ಭಾಸ್ಕರ್ ಶಿವಮೊಗ್ಗ ಮತ್ತು ಶ್ರೀಮತಿ ವಿಜಯಲಕ್ಷ್ಮೀ ನಾಗರಾಜ್.
ಸಾಂಸ್ಕೃತಿಕ ಕಾರ್ಯಕ್ರಮಗಳು : "ವೀಣಾವಾದನ"- ಚಿರಂಜೀವಿ ಅಚ್ಯುತ ಜಗದೀಶ್, "ಸುಗಮ ಸಂಗೀತ"-ಖ್ಯಾತ ಗಾಯಕಿ ವಿದುಷಿ ಕೆ.ಎಂ. ಕುಸುಮ ಮತ್ತು ಸಂಗಡಿಗರಿಂದ, "ಶಾಸ್ತ್ರೀಯ ನೃತ್ಯ"-ನೃತ್ಯ ದಿಶಾ ಟ್ರಸ್ಟ್ ಕಲಾವಿದರಿಂದ (ಗುರುಗಳು : ಡಾ. ದರ್ಶಿನಿ ಮಂಜುನಾಥ್), "ಅಷ್ಟಲಕ್ಷ್ಮೀ ವೈಭವ" ನೃತ್ಯ-ಕು|| ಬಿಂದು ಮತ್ತು ಸಂಗಡಿಗರಿಂದ, "ಸಿತಾರ್ ವಾದನ"-ಪಂ|| ಎಂ.ಎಸ್. ಪ್ರದೀಪ್ ಕುಮಾರ್, ತಬಲಾ-ಮೈಸೂರು ಪಿ. ಅಶ್ವಿನ್, "ಗಮಕ"- ವಿ|| ಸಿ.ಎನ್. ಸುಬ್ಬಣ್ಣ (ವ್ಯಾಖ್ಯಾನ) ಮತ್ತು ಡಾ. ಸಂಧ್ಯಾ (ವಾಚನ). ದಿನಾಂಕ : ನವೆಂಬರ್ 3, 2025, ಸೋಮವಾರ, ಸಮಯ : ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ. ಸ್ಥಳ : ನಯನ ಸಭಾಂಗಣ, ಜೆ.ಸಿ. ರಸ್ತೆ, ಬೆಂಗಳೂರು.
ಸರ್ವರಿಗೂ ಆತ್ಮೀಯ ಸುಸ್ವಾಗತ
